Connect with us

DAKSHINA KANNADA

ತೆಂಗಿನ ಕಾಯಿ ಬಿದ್ದು ಯುವಕ ಸಾವು….!!

ಪುತ್ತೂರು ಜೂನ್ 20: ತೆಂಗಿನಕಾಯಿ ಬಿದ್ದು ಯುವಕನೊಬ್ಬ ಸಾವನಪ್ಪಿರುವ ಘಟನೆ ಪುತ್ತೂರಿನ ಮುಕ್ವೆ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಬೆಳ್ಳಿಪ್ಪಾಡಿ ನಿವಾಸಿ ರಮೇಶ್ (38) ಎಂದು ಗುರುತಿಸಲಾಗಿದೆ.


ಈತ ಜೂನ್ 19 ರಂದು ಪುತ್ತೂರಿನ ಮುಕ್ವೆ ತೆಂಗಿನ ತೋಟದಿಂದ ಎಳನೀರು ಇಳಿಸಲು ತೆರಳಿದ್ದು, ಮರದಿಂದ ಎಳನೀರನ್ನು ಹಗ್ಗದಿಂದ ಇಳಿಸುತ್ತಿದ್ದ ಸಂದರ್ಭದಲ್ಲಿ ತೆಂಗಿನಕಾಯಿಯೊಂದು ಬೆನ್ನಿಗೆ ಬಿದ್ದು ರಮೇಶ್ ಗಂಭೀರವಾಗಿ ಗಾಯಗೊಂಡಿದ್ದರು, ಗಾಯಗೊಂಡ ರಮೇಶ್ ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

Facebook Comments

comments