LATEST NEWS
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಯೂತ್ ಕಾಂಗ್ರೇಸ್ ನ ಚುನಾವಣಾ ಪ್ರಚಾರದ ಪೋಸ್ಟರ್….!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಯೂತ್ ಕಾಂಗ್ರೇಸ್ ನ ಚುನಾವಣಾ ಪ್ರಚಾರದ ಪೋಸ್ಟರ್….!
ಮಂಗಳೂರು ನವೆಂಬರ್ 7: 5 ವರ್ಷ ಮಂಗಳೂರು ಮಹಾನಗರಪಾಲಿಕೆಯಲ್ಲಿ ಅಧಿಕಾರದಲ್ಲಿದ್ದು ಮಾಡಿರುವ ಕೆಲಸಗಳಿಂದ ಪ್ರಚಾರ ಪಡೆಯಬೇಕಾದ ಕಾಂಗ್ರೇಸ್ ಪಕ್ಷ ಇದುವರೆಗೆ ಮಾಡದ ಕಾರ್ಯಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿ ಈಗ ನಗೆಪಾಟಲಿಗೀಡಾಗಿದೆ.
ಮಂಗಳೂರು ಮಹಾನಗರಪಾಲಿಕೆ ಚುನಾವಣೆಗೆ ಇನ್ನು ಕೆಲವೆ ದಿನಗಳು ಬಾಕಿ ಇರುವಂತೆ ವಿವಿಧ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಆದರೆ ಯೂತ್ ಕಾಂಗ್ರೇಸ್ ಮಾತ್ರ ಸ್ವಲ್ಪ ಮುಂದೆ ಹೋಗಿ ತಮ್ಮದೇ ಪಕ್ಷ ಇದುವರೆಗೆ ಅಧಿಕಾರಿದಲ್ಲಿತ್ತು ಎನ್ನುವುದನ್ನೇ ಮರೆತು, ತಮ್ಮ ಚುನಾವಣಾ ಪ್ರಚಾರ ಸಾಮಾಗ್ರಿಯನ್ನು ಹಂಚುತ್ತಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರು ನಗರದ ಮುಂದಿನ ಭವಿಷ್ಯದ ಕಲ್ಪನೆ ಹೊತ್ತ ಯೂತ್ ಕಾಂಗ್ರೆಸ್‍ನ ಪ್ರಚಾರದ ಪೋಸ್ಟರ್ ಗಳು ಸದ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಸುಸಜ್ಜಿತ ಕ್ರೀಡಾಂಗಣಗಳ ನಿರ್ಮಾಣಕ್ಕಾಗಿ ,ಉತ್ತಮ ಫುಟ್ ಪಾತ್ ನಿರ್ಮಾಣಕ್ಕಾಗಿ, ಕೊನಾಜೆಯಿಂದ ಸುರತ್ಕಲ್ ಎನ್ ಐ ಟಿಕೆ ವರೆಗೆ ಮೆಟ್ರೋ ರೈಲು ನಿರ್ಮಾಣಕ್ಕಾಗಿ, ನಗರಪಾಲಿಕೆಯಲ್ಲಿ ಆನ್ ಲೈನ್ ಮೂಲಕ ನೀರಿನ ಬಿಲ್ಲು, ಮನೆ ತೆರಿಗೆ , ಕಟ್ಟಡ ಪರವಾನಿಗೆ, ಉದ್ದಿಮೆ ಪರವಾನಿಗೆಗಳ ಪಾವತಿಗಾಗಿ ಕಾಂಗ್ರೆಸ್ ಗೆ ಮತ ಹಾಕಿ ಎಂದು ವಿನಂತಿಸಿಕೊಂಡಿದ್ದಾರೆ.
ಮಹಾನಗರಪಾಲಿಕೆಯಾದ ನಂತರ ಬಹುತೇಕ ಕಾಂಗ್ರೇಸ್ ರಾಜ್ಯಭಾರ ನಡೆಸುತ್ತಿದೆ. ಕಾಂಗ್ರೆಸ್‍ಗೆ ಮಾಡಲಾಗದಿರೋದು, ಇನ್ನು ಮುಂದೆ ಅಧಿಕಾರ ಬಂದೊಡನೆ ಮಾಡುತ್ತರೆಂದರೇ ನಂಬಬೇಕೋ? ಅನ್ನೋದು ಜನರ ಪ್ರಶ್ನೆಯಾಗಿದೆ. ಅಷ್ಟೆ ಅಲ್ಲ , ಇಂಡೋನೇಷ್ಯದ ಬಾಲಿ ಬಟಾನಿಕಲ್ ಗಾರ್ಡನ್‍ನಲ್ಲಿ ಇರುವ ಅಂಧರಿಗಾಗಿ ನಿರ್ಮಿಸಲಾದ ಟಾಕ್ಟೈಲ್ ಫುಟ್ ಪಾತ್ ಫೋಟೋ ಹಾಕಿ ಉತ್ತಮ ಫುಟ್ ಪಾತ್ ನಿರ್ಮಿಸಿದ ಕಾಂಗ್ರೆಸಿಗೆ ನನ್ನ ಮತ ಅಂದ್ರೆ ಮಂಗಲೂರಿನ ಮತದಾರರು ರಾಹುಲ್ ಗಾಂಧಿ ತರ ಅಲ್ಲ ಅಂತ ಜನ ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.