Connect with us

LATEST NEWS

ಪ್ರಧಾನಿ ಮೋದಿ ಪರವಾಗಿಲ್ಲ ಎನ್ನುವವರು ಕಾಂಗ್ರೇಸ್ ನಲ್ಲೆ ಇದ್ದಾರೆ – ಮಾಜಿ ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿ ಪರವಾಗಿಲ್ಲ ಎನ್ನುವವರು ಕಾಂಗ್ರೇಸ್ ನಲ್ಲೆ ಇದ್ದಾರೆ – ಮಾಜಿ ಸಿಎಂ ಸಿದ್ದರಾಮಯ್ಯ

ಉಡುಪಿ ನವೆಂಬರ್ 6: ಪ್ರಧಾನಿ ನರೇಂದ್ರ ಮೋದಿ ಪರವಾಗಿಲ್ಲ ಎನ್ನುವವರು ನಮ್ಮಲ್ಲೇ ಕೆಲವರು ಇದ್ದಾರೆ. ಈ ದೇಶಕ್ಕೆ ಮೋದಿಯ ಕೊಡುಗೆ ಏನು ಅಂತ ಅವರು ಮೊದಲು ಉತ್ತರಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ವಪಕ್ಷೀಯರ ಕಿವಿ ಹಿಂಡಿದ್ದಾರೆ.

ಉಡುಪಿಯಲ್ಲಿ ನಡೆದ ಗಾಂಧೀಜಿ 150ರ ಸಮಾವೇಶಲ್ಲಿ ಮಾತನಾಡಿದ ಅವರು, ಬಿಜೆಪಿಯ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಟಿಪ್ಪು ವಿಚಾರವನ್ನು ಪಠ್ಯಕ್ರಮದಿಂದ ತೆಗೆಯುತ್ತಾರೆ. ಇದರಿಂದ ಇತಿಹಾಸವೇ ಅಪೂರ್ಣ ಆಗುತ್ತೆ. ಟಿಪ್ಪು, ಹೈದರಾಲಿ ಇರದ ಮೈಸೂರು ಚರಿತ್ರೆ ಅಪೂರ್ಣ. ಇದೇ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಟಿಪ್ಪುವಿನ ಪೇಟ ಹಾಕಿಕೊಂಡು, ಟಿಪ್ಪು ಬಟ್ಟೆ ತೊಟ್ಕೊಂಡು ಪಕ್ಕದಲ್ಲಿ ಶೋಭಾ ನಿಲ್ಲಿಸ್ಕೊಂಡು ಫೊಟೋ ತೆಗಿಸ್ಕೊಂಡಿಲ್ವಾ ಎಂದು ಚಾಟಿ ಬೀಸಿದರು. ಕೆಜೆಪಿಯಲ್ಲಿ ಇದ್ದಾಗ ಇವರಿಗೇನು ಬೇರೆ ನಾಲಿಗೆ ಇತ್ತಾ? ಯಡಿಯೂರಪ್ಪನಿಗೆ ಎಷ್ಟು ನಾಲಿಗೆ ಎಂದು ಪ್ರಶ್ನೆ ಮಾಡಿದ ಮಾಜಿ ಸಿಎಂ, ನಾನು ಟಿಪ್ಪು ಜಯಂತಿ ಮಾತ್ರ ಮಾಡಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡರ ಜಯಂತಿ ಮಾಡಿದೋನೂ ನಾನೇ ಮಾಡಿರುವುದಾಗಿ ಹೇಳಿದರು.

ಕಾಂಗ್ರೆಸ್ ಇತಿಹಾಸ, ಬಿಜೆಪಿ ಆರ್‌ಎಸ್‌ಎಸ್ ಇತಿಹಾಸ ಅಧ್ಯಯನ ಮಾಡಿ ಫೀಲ್ಡ್ ಗೆ ಹೋಗಿ ಎಂದು ಕಾಂಗ್ರೇಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಹೆಡ್ ಮಾಸ್ಟರ್ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡರು.