LATEST NEWS
ತಂಜಾವುರು – ಎರಡು ಬಸ್ ಗಳ ನಡುವೆ ಸಿಲುಕಿದರೂ ಬದುಕುಳಿದ ಯುವಕ.. ಯಮನ ಭೇಟಿ ಕ್ಯಾನ್ಸಲ್-ವಿಡಿಯೋ ವೈರಲ್
ತಂಜಾವುರು ಜನವರಿ 04: ಎರಡು ಬಸ್ ಗಳ ನಡುವೆ ಯುವಕನೊಬ್ಬ ಸಿಕ್ಕಿ ಹಾಕಿಕೊಂಡರು ಬದುಕುಳಿದ ಘಟನೆ ತಂಜಾವೂರು ಜಿಲ್ಲೆಯ ಪುತ್ತುಕೊಟೈ ಎಂಬಲ್ಲಿ ನಡೆದಿದೆ.
ತಮಿಳುನಾಡಿನ ಪತ್ತುಕೊಟ್ಟೈನಲ್ಲಿ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದಾಗ ಬಸ್ಸೊಂದು ವೇಗವಾಗಿ ಬಂದಿತ್ತು. ಈ ವೇಳೆ ಅದೇ ಬಸ್ ನ್ನು ಓವರ್ ಟೇಕ್ ಮಾಡಿ ಇನ್ನೊಂದು ಬಸ್ ನುಗ್ಗಿದೆ. ಈ ವೇಳೆ ರಸ್ತೆ ದಾಟುತ್ತಿದ್ದ ವ್ಯಕ್ತಿ ಎರಡು ಬಸ್ ಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದಾನೆ. ಈ ಘಟನೆಯನ್ನು ನೋಡಿದವರೆಲ್ಲರೂ ಅವನ ಕಥೆ ಮುಗಿಯಿತು ಎಂದುಕೊಂಡರು. ಆದರೆ ಎರಡು ಬಸ್‌ಗಳು ಸ್ವಲ್ಪ ದೂರ ಸಾಗುತ್ತಿದ್ದಂತೆ ವ್ಯಕ್ತಿ ಕೆಳಗೆ ಬಿದ್ದಿದ್ದಾರೆ. ಕೆಲವು ಸೆಕೆಂಡ್ ಗಳಲ್ಲಿ ವ್ಯಕ್ತಿ ಎದ್ದು ಹೋಗಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಮ ರಜೆಯಲ್ಲಿದ್ದಿರಬೇಕು ಎಂದು ಕಮೆಂಟ್ ಮಾಡಿದ್ದಾರೆ.
great escape pic.twitter.com/bYCH2lNbNi
— themangaloremirror (@themangaloremir) January 4, 2025
1 Comment