LATEST NEWS
ಕಾಪು ಬೀಚ್ ನಲ್ಲಿ ಯುವಕರಿಬ್ಬರು ಸಮುದ್ರಪಾಲು : ಮೂವರ ರಕ್ಷಣೆ
ಉಡುಪಿ, ಅಕ್ಟೋಬರ್ 18: ಉಡುಪಿ ಸಮುದ್ರದಲ್ಲಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ ಘಟನೆ ಇಂದು ಭಾನುವಾರ ಸಂಜೆ ಸಂಭವಿಸಿದೆ. ಜಿಲ್ಲೆಯ ಕಾಪು ಬೀಚ್ ನಲ್ಲಿ ಈ ದುರ್ಘಟನೆ ಸಂಭವಿಸಿದ್ದು ಇಬ್ಬರು ಪ್ರವಾಸಿಗರು ದಾರುಣವಾಗಿ ಸಾವನ್ನಪ್ಪಿದ್ದಾರೆ, ಮೃತರನ್ನು ಬೆಂಗಳೂರಿನ ಹೇಸರಘಟ್ಟದ ನಿವಾಸಿಗಳಾದ ರೂಪೇಶ್ (21 ) ಕಾರ್ತಿಕ್ (23 ) ಮೃತ ದುರ್ದೈವಿಗಳು.
ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿದ್ದು, ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ. ಬೆಂಗಳೂರಿನಿಂದ ಬಂದ 5 ಮಂದಿ ಯುವಕರ ತಂಡ ರವಿವಾರ ಸಂಜೆ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಯೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದರು. ಮೇಲಕ್ಕೆ ತಂದು ಆಕ್ಸಿಜನ್ ನೀಡಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್್ದನು. ನೀರಿನಲ್ಲಿ ಮುಳುಗಿದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಐವರು ಸ್ನೇಹಿತರು ಬೆಂಗಳೂರಿನಿಂದ ಸುತ್ತಾಡಲು ಉಡುಪಿಗೆ ಬಂದಿದ್ದರು. ಇಬ್ಬರು ನೀರಿಗಿಳಿದು ಈಜಾಡುತ್ತಿದ್ದಾಗ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ. ಬಳಿಕ ಮೃತ ಯುವಕರನ್ನು ಸ್ಥಳೀಯ ಮೀನುಗಾರರು ಮೇಲಕ್ಕೇತ್ತಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.