LATEST NEWS
ಬಾಲಿವುಡ್ ಡ್ರಗ್ ಮಾಫಿಯಾ, ಡ್ರಗ್ ಪೆಡ್ಲರ್ ಕಿಶೋರ್ ಶೆಟ್ಟಿಯ ಸ್ನೇಹಿತೆಯನ್ನು ಬಂಧಿಸಿದ ಮಂಗಳೂರು ಪೋಲೀಸರು

ಬಾಲಿವುಡ್ ಡ್ರಗ್ ಮಾಫಿಯಾ, ಡ್ರಗ್ ಪೆಡ್ಲರ್ ಕಿಶೋರ್ ಶೆಟ್ಟಿಯ ಸ್ನೇಹಿತೆಯನ್ನು ಬಂಧಿಸಿದ ಮಂಗಳೂರು ಪೋಲೀಸರು
ಮಂಗಳೂರು, ಸೆಪ್ಟೆಂಬರ್ 22: ಡ್ರಗ್ ಪೆಡ್ಲರ್ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಯ ವಿಚಾರಣೆಯನ್ನು ಮಂಗಳೂರು ಪೋಲೀಸರು ತೀವೃಗೊಳಿಸಿದ್ದಾರೆ.
ಈ ಸಂಬಂಧ ಕಿಶೋರ್ ಮಾಹಿತಿಯ ಮೇರೆಗೆ ಸ್ನೇಹಿತೆಯೋರ್ವಳನ್ನು ಪೋಲೀಸರು ಬಂಧಿಸಿದ್ದಾರೆ.

ಬಂಧಿತ ಯುವತಿಯನ್ನು ಮಣಿಪುರ ಮೂಲದ ಆಸ್ಕಾ ಎಂದು ಗುರುತಿಸಲಾಗಿದೆ.
ಈಕೆ ಮಂಗಳೂರಿನ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಈಕೆ ಮೂಲಕ ಡ್ರಗ್ಸ್ ಮಂಗಳೂರಿನ ಯುವತಿಯರಿಗೆ ಸಾಗಾಟವಾಗುತ್ತಿತ್ತು ಎನ್ನುವ ಮಾಹಿತಿ ಇದೀಗ ಹೊರ ಬಂದಿದೆ.
ಆಸ್ಕಾ ಳನ್ನು ಪೋಲೀಸರು ಡ್ರಗ್ ಟೆಸ್ಟ್ ಮಾಡಿದಾಗ ಈಕೆಯಲ್ಲಿ ಪಾಸಿಟೀವ್ ಪತ್ತೆಯಾಗಿದ್ದು, ಕಿಶೋರ್ ಶೆಟ್ಟಿ ಜೊತೆಗೆ ಈಕೆಯೂ ಮಾದಕವಸ್ತುಗಳನ್ನು ಸೇವಿಸುತ್ತಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಕಿಶೋರ್ ಶೆಟ್ಟಿ ಹಾಗೂ ಆತನ ಸಹಚರ ಅಕೀಲ್ ನೌಶೀದ್ ನನ್ನು ಪೋಲೀಸರು ಇದೀಗ ತೀವೃ ವಿಚಾರಣೆಗೆ ಒಳಪಡಿಸಿದ್ದು, ಆರೋಪಿಗಳಿಂದ ಡ್ರಗ್ಸ್ ಜಾಲದ ಕುರಿತ ಒಂದೊದೇ ಸತ್ಯಗಳನ್ನು ಹೊರಗೆಳೆಯುತ್ತಿದ್ದಾರೆ.
ಮಂಗಳೂರು ನ್ಯಾಯಾಲಯ ಇಬ್ಬರೂ ಆರೋಪಿಗಳನ್ನು ಏಳು ದಿನಗಳ ಕಾಲ ಪೋಲೀಸ್ ಕಸ್ಟಡಿಗೆ ನೀಡಿದ್ದು, ಮಂಗಳೂರು ಪೋಲೀಸರು ಡ್ರಗ್ಸ್ ಜಾಲದ ಬುಡವನ್ನೇ ಹುಡುಕುವತ್ತ ಕಾರ್ಯ ಪ್ರವೃತ್ತರಾಗಿದ್ದಾರೆ.