Connect with us

    DAKSHINA KANNADA

    ಆಸಿಡ್ ಸೇವಿಸಿ ಯುವತಿ ಆತ್ಮಹತ್ಯೆ

    ಆಸಿಡ್ ಸೇವಿಸಿ ಯುವತಿ ಆತ್ಮಹತ್ಯೆ

    ಪುತ್ತೂರು,ಅಕ್ಟೋಬರ್ 5: ಮದುವೆ ನೆಂಟಸ್ಥಿಕೆ ಕೂಡಿ ಬರಲಿಲ್ಲವೆಂದು ಮನನೊಂದ ಯುವತಿ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕಡಬದ ಹಳೆನೇರಂಕಿ ಗ್ರಾಮದ ಅರಜ್ಜಿಗೆ ಎಂಬಲ್ಲಿ ನಡೆದಿದೆ. ಅರಜ್ಜಿಗೆ ನಿವಾಸಿ ಕೃಷ್ಣಪ್ಪ ಪೂಜಾರಿ ಎಂಬವರ ಪುತ್ರಿ ಸೌಮ್ಯ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು, ಅಕ್ಟೋಬರ್ 4 ರಂದು ಈ ಘಟನೆ ನಡೆದಿದೆ.

    ಯುವತಿಯನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಸೌಮ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಮದುವೆ ವಯಸ್ಸಿಗೆ ಬಂದಿದ್ದ ಸೌಮ್ಯಳನ್ನು ನೋಡಲು ಹಲವು ನೆಂಟಸ್ಥಿಕೆ ಬಂದಿದ್ದರೂ, ಯಾವುದೂ ಕೂಡಿ ಬಂದಿರಲಿಲ್ಲ. ಇದರಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಆಕೆಯ ಕುಟುಂಬವರ್ಗ ಸಂಶಯ ವ್ಯಕ್ತಪಡಿಸಿದೆ. ಯುವತಿಯ ತಂದೆ ಕೃಷ್ಣಪ್ಪ ಪೂಜಾರಿ ನೀಡಿದ ದೂರಿನ ಹಿನ್ನಲೆಯಲ್ಲಿ ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply