LATEST NEWS
ಈ 53 ವರ್ಷದ ಆಟೋಚಾಲಕನ ಫಿಟ್ನೆಸ್ ನೋಡಿದ್ರೆ ಬೆರಗಾಗ್ತೀರಾ..!
ಕೇರಳ, ಜನವರಿ 12: ಕೇರಳದ ಆಟೋ ಚಾಲಕರೊಬ್ಬರು ಅದ್ಭುತ ಮೈಕಟ್ಟಿನೊಂದಿಗೆ ಯುವಕರ ಪಾಲಿನ ಫಿಟ್ನೆಸ್ ಫ್ರೀಕ್ ಆಗಿದ್ದಾರೆ. ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕರಾಗಿರುವ ರಾಜ ಶೇಖರನ್ (53) ಎಂಬುವರು ಫಿಟ್‌ನೆಸ್ ಉತ್ಸಾಹಿಯಾಗಿದ್ದು ಯುವಕರ ಮೇಲೆ ಪ್ರಭಾವ ಬೀರಿದ್ದಾರೆ.
ವರ್ಕೌಟ್ ಮಾಡಲು ದುಬಾರಿ ಹಾಗು ದೊಡ್ಡ ದೊಡ್ಡ ಜಿಮ್ ಉಪಕರಣಗಳ ಅಗತ್ಯವಿಲ್ಲ ಎಂಬುದನ್ನ ರಾಜಶೇಖರನ್ ತೋರಿಸಿಕೊಟ್ಟಿದ್ದಾರೆ. ತಮ್ಮ ಪುಟ್ಟ ಮನೆಯಲ್ಲೇ ಅತಿ ಕಡಿಮೆ ಬೆಲೆಯ ಜಿಮ್ ಉಪಕರಣಗಳನ್ನ ಜೋಡಿಸಿಟ್ಟುಕೊಂಡು ಪ್ರತಿದಿನ ವ್ಯಾಯಾಯ ಮಾಡುವ ಅವರ ಉತ್ಸಾಹಕ್ಕೆ ಹದಿಹರೆಯದವರೂ ಸಹ ಹುಬ್ಬೇರಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 17,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅವರು ದೈನಂದಿನ ವ್ಯಾಯಾಮವನ್ನು ಮಾಡುತ್ತಾರೆ. ಶೇಖರನ್ ಅವರ ಆಹಾರಕ್ರಮ ಕೂಡ ತತುಂಬಾ ವಿಶೇಷವಾಗಿದ್ದು ಕಟ್ಟುನಿಟ್ಚಿನ ಆಹಾರಪದ್ಧತಿ ರೂಢಿಸಿಕೊಂಡಿದ್ದಾರೆ.
ಅವರ ಆಹಾರದಲ್ಲಿ ಸಕ್ಕರೆ, ಸಂಸ್ಕರಿಸಿದ ಆಹಾರಗಳು, ಸಂಸ್ಕರಿಸಿದ ಎಣ್ಣೆ ಮತ್ತು ಹಿಟ್ಟುಗಳಿಗೆ ಕಟ್ಟುನಿಟ್ಟಿನ ನಿಷೇಧವಿದೆ. ಶೇಖರನ್ ಅವರು ಸಾಮಾನ್ಯವಾಗಿ ಬೆಳಿಗ್ಗೆ 4 ಗಂಟೆಯಿಂದ ತಮ್ಮ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ ಮತ್ತು 6 ಕಿಮೀ. ನಡೆಯುತ್ತಾರೆ. ಶೇಖರನ್ ಅವರು ತನ್ನ ಅನುಯಾಯಿಗಳಿಗೆ ಯಾವುದೇ ಸಲಹೆಗಳನ್ನು ನೀಡುವುದಿಲ್ಲ ಮತ್ತು ಆಹಾರ ತಜ್ಞರು ಅಥವಾ ತರಬೇತುದಾರರನ್ನು ಸಂಪರ್ಕಿಸಲು ಕೇಳುತ್ತಾರೆ.
You must be logged in to post a comment Login