Connect with us

    FILM

    ಬಘೀರ’ ಸಿನಿಮಾ ಶೂಟಿಂಗ್ ವೇಳೆ ನಟ ಶ್ರೀಮುರಳಿಗೆ ಪೆಟ್ಟು

    ಬೆಂಗಳೂರು, ಜನವರಿ 12: ನಟ ಶ್ರೀಮುರಳಿಗೆ `ಬಘೀರ’ ಚಿತ್ರದ ಶೂಟಿಂಗ್ ವೇಳೆ ಅನಾಹುತವಾಗಿದೆ. ಶೂಟಿಂಗ್ ವೇಳೆ ಶ್ರೀಮುರಳಿಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    `ಮದಗಜ’ ಸಿನಿಮಾದ ನಂತರ ಬಘೀರ ಚಿತ್ರದಲ್ಲಿ ನಟ ಶ್ರೀಮುರಳಿ ಬ್ಯುಸಿಯಾಗಿದ್ದರು. ರಾಕ್‌ಲೈನ್ ಸ್ಟುಡಿಯೋದಲ್ಲಿ ಹೊಂಬಾಳೆ ಸಂಸ್ಥೆ ನಿರ್ಮಾಣದ `ಬಘೀರ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಗಾಯಗಳಾಗಿದೆ. ಸೂರಿ ನಿರ್ದೇಶನದ ಈ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿತ್ತು. ಇನ್ನೇರೆಡೆ ದಿನಗಳಲ್ಲಿ ಶೂಟಿಂಗ್‌ಗೆ ಬ್ರೇಕ್ ಬೀಳೋದರಲ್ಲಿತ್ತು. ಈ ವೇಳೆ ಶ್ರೀಮುರಳಿಗೆ ಪೆಟ್ಟಾಗಿದೆ.

    ಈ ಹಿಂದೆ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಶೂಟಿಂಗ್ ವೇಳೆ ಹೀಗೆ ಆಗಿತ್ತು. ಶ್ರೀಮುರಳಿ ಅವರ ಎಡಗಾಲಿಗೆ ಪೆಟ್ಟಾಗಿತ್ತು. ಈಗ ಮತ್ತೆ ಅದೇ ಕಾಲಿಗೆ ಪೆಟ್ಟಾಗಿದೆ. ಹಾಗಾಗಿ ನಟ ಈ ಸಂಬಂಧ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply