DAKSHINA KANNADA
ಅಪ್ಪನಿಂದ ಮಕ್ಕಳಿಗೆ ಸೆಕ್ಸ್ ಎಜುಕೇಶನ್ – ವೈರಲ್ ಆದ ವಿಡಿಯೋ
ಅಪ್ಪನಿಂದ ಮಕ್ಕಳಿಗೆ ಸೆಕ್ಸ್ ಎಜುಕೇಶನ್ – ವೈರಲ್ ಆದ ವಿಡಿಯೋ
ಮಂಗಳೂರು,ನವೆಂಬರ್ 7: ಅಪ್ಪ-ಅಮ್ಮ ಮಕ್ಕಳಿಗೆ ಮನೆಯೊಳಗೆ ಹಾಗೂ ಶಿಕ್ಷಕರು ಕ್ಲಾಸ್ ನಲ್ಲಿ ಸೆಕ್ಸ್ ಎಜುಕೇಶನ್ ಕೊಡಬೇಕೆಂದು ಒತ್ತಾಯ ಹೇರುತ್ತಿರುವ ಬುದ್ಧಿಜೀವಿಯೊಬ್ಬರು ತನ್ನ ಮಕ್ಕಳೊಂದಿಗೆ ಸೆಕ್ಸ್ ಎಜುಕೇಶನ್ ಬಗೆಗಿನ ಚರ್ಚೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಹಾಗೂ ವಿವಾದಾತ್ಮಕವಾಗಿ ಮಾತನಾಡುವ ಯೋಗೀಶ್ ಮಾಸ್ತರ್ ತನ್ನ ಮಕ್ಕಳೊಂದಿಗೆ ಸೆಕ್ಸ್ ಎಜುಕೇಶನ್ ಬಗ್ಗೆ ಚರ್ಚೆ ನಡೆಸಿದ ವ್ಯಕ್ತಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಕ್ಕಳಿಗೆ ಸೆಕ್ಸ್ ಎಜುಕೇಶನ್ ಕಡ್ಡಾಯವಾಗಿ ಕೊಡಬೇಕೋ , ಬೇಡವೋ ಎಂದು ಕೇಳುತ್ತಿರುವ ಯೋಗೀಶ್ ಮಾಸ್ಟರ್ ಗೆ ಆತನ ಮಕ್ಕಳು ಮುಜುಗರವಾಗಿಯೇ ಬೇಕು ಎನ್ನುವ ದೃಶ್ಯವಿರುವ ಈ ವಿಡಿಯೋದಲ್ಲಿ ಗಂಡು ಹಾಗೂ ಹೆಣ್ಣಿನ ಗುಪ್ತಾಂಗಗಳ ಬಗ್ಗೆಯೂ ಮಕ್ಕಳಲ್ಲಿ ಈ ಬಗ್ಗೆ ಹೇಳಿಸುತ್ತಿದ್ದಾರೆ.
ಈ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಕಮೆಂಟ್ ಗಳು ಬರುತ್ತಿದ್ದು, ಯೋಗಿಶ್ ಮಾಸ್ಟರ್ ಅವರ ಈ ವಿಡಿಯೋ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವಿಚಾರವಾಗಿ ” ಮನೆಯ ನಾಲ್ಕು ಗೋಡೆಗಳ ಮಧ್ಯೆ ಈ ವಿಚಾರವನ್ನು ಚರ್ಚೆ ನಡೆಸುವುದೋ ಅಥವಾ ಬಿಡುವುದೋ ಆತನ ಅಭಿವ್ಯಕ್ತ ಸ್ವಾತಂತ್ರ್ಯ ಬಿಟ್ಟ ವಿಚಾರ. ಆದರೆ ನಾಲ್ಕು ಗೋಡೆಗಳ ಮಧ್ಯೆ ಮಾತನಾಡುವ ವಿಚಾರಗಳನ್ನು ಎಳೆ ತಲೆಗಳಿಗೆ ತುಂಬಿ ಈತ ಏನು ಸಾಧಿಸ ಹೊರಟಿದ್ದಾನೆ ಎನ್ನುವುದು ಮಾತ್ರ ತಿಳಿಯುತ್ತಿಲ್ಲ . ಇವತ್ತು ಎಲ್ಲರಿಗೂ ಸೆಕ್ಸ್ ಎಜುಕೇಶನ್ ಬೇಕು ಎನ್ನುವ ಈತ ನಾಳೆ ರಸ್ತೆಯಲ್ಲಿ ನಡೆಯುತ್ತಿರುವ ಹುಡುಗಿಯೊಂದಿಗೆ ಸೆಕ್ಸ್ ಗೆ ಬರುವಂತೆ ಕರೆದರೂ ಕರೆಯಬಹುದು. ಇದನ್ನು ಪ್ರಶ್ನಿಸಿದರೂ ಅದು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಧಕ್ಕೆ ಎಂದೂ ಈತ ವಾದಿಸಲೂ ಸಾಧ್ಯವಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಮನೆಯಲ್ಲೂ ಅದು ಶ್ರೀಮಂತ ಕುಟುಂಬವಿರಲಿ, ಅತ್ಯಂತ ಕಡು ಬಡವ ಕುಟುಂಬವಿರಲಿ. ಎಲ್ಲರಲ್ಲೂ ಸೆಕ್ಸ್ ಕುರಿತ ಮಾಹಿತಿ ಕಾಲ ಕಾಲಕ್ಕೆ ಬಂದೇ ಬರುತ್ತೆ. ಪುಸ್ತಕದಲ್ಲೋ, ಕ್ಲಾಸ್ ರೂಂ ನಲ್ಲೋ ಕಲಿಸಿದರೆ ಮಾತ್ರ ಅದು ತಿಳಿಯುತ್ತದೆ ಎನ್ನುವುದು ಯೋಗೀಶ್ ಮಾಸ್ಟರ್ ಎಂದು ಕರೆಸಿಕೊಳ್ಳುವ ವ್ಯಕ್ತಿಯ ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಪ್ರತಿ ಕುಟುಂಬದಲ್ಲಿ ಅಪ್ಪ ಅಪ್ಪನಾಗಿರುವುದು, ಅಮ್ಮ ಅಮ್ಮನಾಗಿರುವುದು ಹಾಗೂ ಅಣ್ಣ, ತಮ್ಮ, ತಂಗಿ ಅಕ್ಕ ಆಗಿರುವುದು. ಸೆಕ್ಸ್ ಎಜುಕೇಶನ್ ಇಲ್ಲದೆಯೇ ಸಮಾಜ ಇಲ್ಲಿ ತನಕ ನಡೆದಿದೆ ಮುಂದೆಯೂ ನಡೆಯುತ್ತೆ ಎನ್ನುವಂತಹ ಕಮೆಂಟ್ ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿದವರಿಂದ ಬರುತ್ತಿದೆ.
ಇಂಥ ಕ್ಷುಲ್ಲಕ ವಿಚಾರವನ್ನಿಟ್ಟುಕೊಂಡು ಇಂಥಹ ವಿವಾದಾತ್ಮಕ ವಿಚಾರದಲ್ಲಿ ಮುಗ್ದ ಮಕ್ಕಳ ವಿಡಿಯೋ ತಯಾರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ವಿಕೃತ ವ್ಯಕ್ತಿಯಂತೆ ಯೋಚಿಸುವ ಇಂಥ ವ್ಯಕ್ತಿಗಳಿಗೆ ಇದೀಗ ಸರಕಾರದಿಂದಲೇ ಭದ್ರತೆಯೂ ದೊರೆಯುತ್ತಿರುವುದು ಮಾತ್ರ ದುರಂತ ಎನ್ನುವ ಆಕ್ರೋಶವೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುವವರದ್ದಾಗಿದೆ.