Connect with us

LATEST NEWS

ಮೀನುಗಾರಿಕೆಗೆ ತೆರಳಿದ ಟ್ರಾಲ್ ಬೋಟ್ ಸಂಪೂರ್ಣ ಬಸ್ಮ

ಮೀನುಗಾರಿಕೆಗೆ ತೆರಳಿದ ಟ್ರಾಲ್ ಬೋಟ್ ಸಂಪೂರ್ಣ ಬಸ್ಮ

ಮಂಗಳೂರು ನವೆಂಬರ್ 7: ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ಬೆಂಕಿಗಾಹುತಿಗಾದ ಘಟನೆ ಮಂಗಳೂರು ಕರಾವಳಿ ತೀರದಲ್ಲಿ ನಡೆದಿದೆ. ಬಜಾಲ್ ನಿವಾಸಿ ಐರಲ್ ಜೆಸ್ವಿ ಎಂಬವರಿಗೆ ಸೇರಿದ ಮೀನ ಹೆಸರಿನ ಬೋಟ್ ಎಂದು ಗುರುತಿಸಲಾಗಿದೆ.

ಸುಮಾರು 10 ಮಂದಿ ಮೀನುಗಾರರಿದ್ದ ಟ್ರಾಲ್ ಬೋಟ್ ಇದಾಗಿದ್ದು ಶಾರ್ಟ್ ಸರ್ಕ್ಯೂಟ್ ಈ ಘಟನೆಗೆ ಕಾರಣ ಎನ್ನಲಾಗಿದೆ. ನಿನ್ನೆ ಸಂಜೆ 3 ರಿಂದ 4 ಗಂಟೆಯ ಅಂದಾಜಿಗೆ ಮೀನುಗಾರಿಕೆ ತೆರಳಿದ ಸಂದರ್ಭ ಈ ಘಟನೆ ನಡೆದಿದೆ.

ಮೀನುಗಾರಿಕೆ ಮುಗಿಸಿ ಮೀನುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಬೋಟ್ , ದಡ ಸೇರಲು ಇನ್ನೇನು 2 ಗಂಟೆ ಅವಧಿ (30-40 ನಾಟೇಕಲ್) ಇರುವಾಗಲೇ ಬೋಟ್ ಹೊತ್ತಿ ಉರಿದಿದೆ. ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ ರೈಸಿಂಗ್ ಲಾರ್ಡ್ ಬೋಟ್. ಸುಮಾರು 50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Video

Facebook Comments

comments