LATEST NEWS
ಬಡಗುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದ ಕಡಬಾಳ ಉದಯ ಹೆಗಡೆ ನಾಪತ್ತೆ

ಮಂಗಳೂರು ಎಪ್ರಿಲ್ 28: ಬಡಗುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದ ಕಡಬಾಳ ಉದಯ ಹೆಗಡೆ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು, ಈ ಕುರಿತಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯ ಹೆಗಡೆ ಅವರು ಖ್ಯಾತ ಯಕ್ಷಗಾನ ಕಲಾವಿದೆ ಯಕ್ಷ ಶಿಕ್ಷಕಿಯಾಗಿರುವ ಅಶ್ವಿನಿ ಹೆಗಡೆ ಯವರ ಪತಿ. ಏಪ್ರಿಲ್ 21 ರಂದು ಸಂಜೆ ತನ್ನ ಆಲ್ಟೋ ಕಾರಿನಲ್ಲಿ ಹೋದವರು ಮರಳಿ ಮನೆಗೆ ಬಂದಿಲ್ಲ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಶ್ವಿನಿ ಹೆಗಡೆ ತಿಳಿಸಿದ್ದು, ಬಂಧುಮಿತ್ರರ ಮನೆಯಲ್ಲೂ ಪತಿ ಉದಯ ಹೆಗಡೆ ಬಗ್ಗೆ ಮಾಹಿತಿ ಇಲ್ಲ ಅಲ್ಲದೆ ಮೊಬೈಲ್ ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಉದಯ ಹೆಗಡೆ ಅವರು ಪ್ರಸ್ತುತ ಕರಾವಳಿಯ ಹೆಸರಾಂತ ಪೆರ್ಡೂರು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.