Connect with us

    LATEST NEWS

    ಏಳು ತಿಂಗಳ ತುಂಬು ಗರ್ಭಿಣಿ ವೈದ್ಯೆಯನ್ನು ಬಲಿ ಪಡೆದ ಕೊರೊನಾ

    ಮಂಗಳೂರು, ಎಪ್ರಿಲ್ 28: ಕೊರೊನಾ ದ ಆರ್ಭಟ ಮಿತಿ ಮೀರಿದ್ದು, ದಿನೇ ದಿನೇ ಕೋವಿಡ್ ಎಂಬ ಹೆಮ್ಮಾರಿ ರಾಜ್ಯದಲ್ಲಿ ನೂರಾರು ಸಂಖ್ಯೆ ಜನರನ್ನು ತನಗೆ ಬಲಿಯಾಗಿಸಿಕೊಳ್ಳುತ್ತಿದೆ. ಇದೀಗ ಮಂಗಳೂರಿನಲ್ಲಿ ರೋಗಿಗಳ ಪ್ರಾಣ ಕಾಪಾಡುವ  ವೈದ್ಯಯೊಬ್ಬರನ್ನು ಪ್ರಾಣವನ್ನೇ ಬಲಿ ಪಡೆದಿದೆ. ಅವರು 7 ತಿಂಗಳ ತುಂಬು ಗರ್ಭಿಣಿ.

    ಮಂಗಳೂರಿನ ಹೊರವಲಯದ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಕೇರಳದ ತಲಶೇರಿ ಮೂಲದ ಡಾ.ಮಾಹಾಬಷೀರಾ ಕೊರೊನಾಗೆ ಬಲಿಯಾದ ದುರ್ದೈವಿ. ಕಳೆದ 8 ತಿಂಗಳ ಹಿಂದೆ ಮಂಗಳೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಶವಾಫೆರ್ ಮಹಮ್ಮದ್ ಅವರನ್ನು ಮದುವೆಯಾಗಿದ್ದ ಡಾ. ಮಹಾಬಷೀರಾ 7 ತಿಂಗಳ ಗರ್ಭಿಣಿಯಾಗಿದ್ದರು.

    ಕಳೆದ ಕೆಲ ದಿನಗಳ ಹಿಂದೆ ದಂಪತಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಆಗಿತ್ತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮಹಾಬಷೀರಾಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply