DAKSHINA KANNADA
ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಆನೆ ಸಾವು

ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಆನೆ ಸಾವು
ಸುಬ್ರಹ್ಮಣ್ಯ ಮೇ 29: ಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಆನೆ ಸಾವನ್ನಪ್ಪಿದೆ. ಗಾಯಗೊಂಡ ಆನೆಯನ್ನು ಅರಣ್ಯ ಪ್ರದೇಶದಲ್ಲಿ ಗಮನಿಸಿದ ಸ್ಥಳೀಯರು ತಕ್ಷಣ ಈ ವಿಚಾರವನ್ನು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಆನೆಯ ಬಗ್ಗೆ ಉದಾಸೀನತೆಯನ್ನು ತೋರಿದ ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆ ಅಧಿಕಾರಿಗಳು ಆನೆಗೆ ಚಿಕಿತ್ಸೆ ನೀಡಲು ನಾಗರಹೊಳೆಯಿಂದ ಅರಿವಳಿಕೆ ತಜ್ಞರನ್ನು ಕರೆಸಿ ಚಿಕಿತ್ಸೆ ನೀಡಿದ್ದರು.

ಆ ಬಳಿಕದ ಘಟನೆಯಲ್ಲಿ ಗಾಯಗೊಂಡ ಆನೆಗೆ ಮತ್ತೊಂದು ಕಾಡಾನೆ ಹಲ್ಲೆ ಮಾಡಿತ್ತು. ತೀವೃವಾಗಿ ಗಾಯಗೊಂಡ ಆನೆಯ ಬಗ್ಗೆ ಯಾವುದೇ ಕಾಳಜಿ ವಹಿಸದ ಹಿನ್ನಲೆಯಲ್ಲಿ ಆನೆ ಇದೀಗ ಕಾಡಿನ ಮಧ್ಯೆಯೇ ಸಾವನ್ನಪ್ಪಿದೆ. ಅರಣ್ಯ ಇಲಾಖೆಯ ನಿರ್ಲಕ್ಷದಿಂದಲೇ ಈ ಘಟನೆ ಸಂಭವಿಸಿದೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡಲಾರಂಭಿಸಿದ್ದಾರೆ.