Connect with us

LATEST NEWS

ಟಾರ್ಗೆಟ್ ಗ್ರೂಫ್ ನಟೋರಿಯಸ್ ರೌಡಿ ಮೇಲೆ ಪೊಲೀಸ್ ಫೈರಿಂಗ್

ಟಾರ್ಗೆಟ್ ಗ್ರೂಫ್ ನಟೋರಿಯಸ್ ರೌಡಿ ಮೇಲೆ ಪೊಲೀಸ್ ಫೈರಿಂಗ್

ಮಂಗಳೂರು ಮೇ 29 ಟಾರ್ಗೇಟ್ ಗ್ರೂಫ್ ರೌಡಿ ಮೇಲೆ ಪೊಲೀಸರು ಪೈರಿಂಗ್ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಪಚ್ಚನಾಡಿಯಲ್ಲಿ ಈ ಘಟನೆ ನಡೆದಿದೆ. ಟಾರ್ಗೆಟ್ ಗ್ರೂಪ್ ನ ಸದಸ್ಯ, ರೌಡಿ ಉಮರ್ ಫಾರೂಕ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್ ಕೊಲೆ ಆರೋಪಿ ಸಮೀರ್ ಹತ್ಯೆಗೆ ಆರೋಪಿ ಉಮರ್ ಫಾರೂಕ್, ಸುರ್ಮಾ ಇಮ್ರಾನ್ ಹಾಗೂ ಇತರರೊಂದಿಗೆ ಸೇರಿ ಸಮೀರ್ ಕೊಲೆಗೆ ಸ್ಕೆಚ್ ಹಾಕಿದ್ದರು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಪೊಲೀಸರು ತೆರಳಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿ ಉಮರ್ ಫಾರೂಕ್ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದು, ಅನಿವಾರ್ಯವಾಗಿ ಆರೋಪಿ ಮೇಲೆ ಪೊಲೀಸರಿ ಪೈರಿಂಗ್ ನಡೆಸಿದ್ದಾರೆ.

ಗಳೂರಿನ ಕಂಕನಾಡಿ ಪೊಲೀಸರು ಕಾಲಿಗೆ ಶೂಟ್ ಮಾಡಿ ಫಾರೂಕ್‍ನನ್ನು ಬಂಧಿಸಿದ್ದಾರೆ. ಉಮರ್ ಫಾರೂಕ್ ಎರಡು ಪ್ರಮುಖ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಸಮೀರ್, ಇಲ್ಯಾಸ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದು, ದಾವೂದ್ ಗ್ಯಾಂಗಿನ ಸದಸ್ಯ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ರೌಡಿ ಫಾರೂಕ್ ಮತ್ತು ಪೇದೆ ಸಂದೀಪ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದು ವರ್ಷದ ಹಿಂದೆ ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್ ಕೊಲೆಯಾಗಿದ್ದನು. ಇಲ್ಯಾಸ್ ಸಂಬಂಧಿ ಉಮರ್ ಫಾರೂಕ್, ಸುರ್ಮಾ ಇಮ್ರಾನ್ ಜೊತೆ ಸೇರಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು.

Facebook Comments

comments