Connect with us

LATEST NEWS

ಐಟಿಐ ಉಪನ್ಯಾಸಕ ಕೊಲೆ ಪ್ರಕರಣ ಮೂವರ ಬಂಧನ

ಐಟಿಐ ಉಪನ್ಯಾಸಕ ಕೊಲೆ ಪ್ರಕರಣ ಮೂವರ ಬಂಧನ

ಮಂಗಳೂರು ಮೇ 29: ಐಟಿಐ ಕಾಲೇಜಿನ ಉಪನ್ಯಾಸಕ ವಿಕ್ರಮ್ ಜೈನ್ ಕೊಲೆ ಪ್ರಕರಣವನ್ನು ಕೊಲೆ ನಡೆದ 8 ಗಂಟೆಗಳಲ್ಲಿ ಭೇಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿಯ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ವಿಕ್ರಮ್‌ ಜೈನ್‌ ಎಂಬುವರನ್ನು ಮೇ 27ರ ತಡ ರಾತ್ರಿ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಸ್ಥಳೀಯ ನಿವಾಸಿಗಳಾದ ನಾಗೇಶ್ ಪೂಜಾರಿ (32) ಹಾಗೂ ಡೀಕಯ್ಯ ನಲ್ಕೆ (39) ಮತ್ತು ಗಣೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ಆರೋಪಿಗಳು ರೈಲಿನಲ್ಲಿ ಮುಂಬೈಗೆ ಪರಾರಿಯಾಗುತ್ತಿರುವ ವೇಳೆ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಗಳಿಗೆ ಆಶ್ರಯ ನೀಡಿದ, ಆರೋಪಿಗಳಲ್ಲಿ ಒಬ್ಬನಾದ ನಾಗೇಶ್‌ ಪೂಜಾರಿ ಎಂಬಾತನ ಸಹೋದರ ಗಣೇಶ್‌ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದಿದ್ದು ಈತನ ಮನೆಯಿಂದ ಪ್ರಕರಣಕ್ಕೆ ಆರೋಪಿಗಳು ಉಪಯೋಗ ಮಾಡಿದ ಯಮಹಾ ಮೋಟಾರ್‌ ಸೈಕಲ್‌ ನ್ನು ಮತ್ತು ಕೃತ್ಯ ನಡೆದ ಸಮಯದಲ್ಲಿ ಆರೋಪಿಗಳು ಧರಿಸಿದ್ದ ಬಟ್ಟೆಬರೆಗಳನ್ನು ವಶಕ್ಕೆ ಪಡೆಯಲಾಗಿದೆ.

Facebook Comments

comments