Connect with us

    BANTWAL

    ಮದುವೆ ಮನೆಗಳಲ್ಲಿ ಚಿನ್ನಕಳ್ಳತನ ಮಾಡುತ್ತಿದ್ದ ಕಳ್ಳಿ ಆರೆಸ್ಟ್

    ಬಂಟ್ವಾಳ ಡಿಸೆಂಬರ್ 11: ಮದುವೆ ಮನೆಗಳಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿಯನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಕಳ್ಳಿಯನ್ನು ಮುಡಿಪು ನಿವಾಸಿ ಫಾತಿಮಾ ಸಹಿನಾಜ್ ಎಂದು ಗುರುತಿಸಲಾಗಿದೆ.

    ಈಕೆ ಮದುವೆ ಸಮಾರಂಭದಲ್ಲಿ ಮದುವೆ ಹಾಲ್ ಗಳಲ್ಲಿ ಬ್ಯಾಗ್ ನಿಂದ ಹಾಗೂ ಮಕ್ಕಳ ಮತ್ತು ಮಹಿಳೆಯರ ಕುತ್ತಿಗೆ ಕೈ ಹಾಕಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಮಹಿಳೆಯನ್ನು ಪೋಲೀಸರು ಬಂಧಿಸಿದ್ದಾರೆ. ಗುರುವಾರ ಪಾಣೆಮಂಗಳೂರು ಎಸ್.ಎಸ್.ಆಡಿಟೋರಿಯಂ ಹಾಲ್ ನಲ್ಲಿ ಈ ಮಹಿಳೆ ಹೆಣ್ಣು ಮಗುವೊಂದರ ಕುತ್ತಿಗೆಯಿಂದ ಸರ ಎಗರಿಸಲು ಪ್ರಯತ್ನಿಸಿದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಕೂಡಲೇ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದು ಪೋಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎಲ್ಲಾ ವಿಚಾರಗಳನ್ನು ಬಾಯಿ ಬಿಟ್ಟಿದ್ದಾಳೆ. ಕಳೆದ 10 ವರ್ಷಗಳಿಂದ ಇದೇ ದಂಧೆಯಲ್ಲಿ ಈಕೆ ತೊಡಗಿ ಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ.

    ಎಸ್.ಎಸ್. ಮಹಲ್ ಮದುವೆ ಹಾಲ್ ನಲ್ಲಿ ಮೂರು ಬಾರಿ ಕಳವು ಮಾಡಿದ ಬಗ್ಗೆಯೂ ಒಪ್ಪಿಕೊಂಡಿದ್ದಾಳೆ. ಯಶಸ್ವಿ ಹಾಲ್ ಫರಂಗಿ ಪೇಟೆ, ತೊಕ್ಕೊಟ್ಟು ಯುನಿಟಿ, ತಲಪಾಡಿ ಖಜನಾ ಸೇರಿದಂತೆ ಇತರ ಹಲವು ಕಡೆಗಳಲ್ಲಿ ಕಳವು ಮಾಡಿದ ಬಗ್ಗೆ ಅವಳು ಒಪ್ಪಿಕೊಂಡಿದ್ದಾಳೆ. ಕಳವು ಮಾಡಿದ ಚಿನ್ನಾಭರಣಗಳನ್ನು ಚಿನ್ನದ ಅಂಗಡಿಗೆ ನೀಡಿ ಕರಗಿಸಿ ಹೊಸ ರೂಪ ಮಾಡಿಸಿದ ಸುಮಾರು ೨೩೪ ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *