BELTHANGADI
56 ಮಂದಿ ಪ್ರವಾಹ ನಿರಾಶ್ರಿತರಿಗೆ ಅನ್ನಪೂರ್ಣೆಯಾದ ಅಗರೀಮಾರ್ ಜಲಜಾಕ್ಷಿ
56 ಮಂದಿ ಪ್ರವಾಹ ನಿರಾಶ್ರಿತರಿಗೆ ಅನ್ನಪೂರ್ಣೆಯಾದ ಅಗರೀಮಾರ್ ಜಲಜಾಕ್ಷಿ
ಮಂಗಳೂರು ಅಗಸ್ಟ್ 21: ಜಲಪ್ರಳಯದಿಂದ ಮನೆ ತೋಟ ಕಳೆದುಕೊಂಡಿರುವ ನಿರಾಶ್ರಿತರಿಗೆ ಮನೆಯಲ್ಲಿ ಆಶ್ರಯ ನೀಡಿ ಊಟ ಉಪಚಾರಾ ಮಾಡುತ್ತಿರುವ ಅಗರೀಮಾರ್ ಜಲಜಾಕ್ಷಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಮನೆಗೆ ನೆಂಟರು ಬಂದರೆ ಸಂಜೆ ವಾಪಾಸ್ ಹೋಗ್ತಾ ರೋ.., ನಾಳೆ ಬೆಳಿಗ್ಗೆ ಹೋಗ್ತಾರಾ ಎಂದು ಲೆಕ್ಕ ಹಾಕುವ ಇಂದಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಂಟಾದ ಜಲಪ್ರವಾಹದಲ್ಲಿ ಮನೆ, ತೋಟ, ಗದ್ದೆ ಸರ್ವಸ್ವವನ್ನೂ ಕಳೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ತನ್ನ ಮನೆಯಲ್ಲೇ ನೆಲೆ, ಆಶ್ರಯ ನೀಡಿ ಊಟ ಉಪಚಾರ ಮಾಡುತ್ತಿದ್ದಾರೆ ಅಗರೀಮಾರ್ ಜಲಜಾಕ್ಷಿ . ಜಲಪ್ರವಾಹ ಉಂಟಾದ ದಿನದಿಂದ ಇಂದಿನವರೆಗೂ ಅವರು ಸುಮಾರು 56 ಮಂದಿ ನಿರಾಶ್ರಿತರಿಗೆ ಮನೆಯಲ್ಲಿ ಊಟ ಉಪಚಾರ ನೀಡುತ್ತಿದ್ದಾರೆ.
ಅಗರೀಮಾರ್ ಜಲಜಾಕ್ಷಿ ಅವರ ಈ ಸೇವಾ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಮಾಜದ ಶ್ರೇಷ್ಠ ವ್ಯಕ್ತಿ ಮತ್ತು ಇವರೇ ನಿಜವಾದ ಸೆಲೆಬ್ರಿಟಿ ಎಂದು ಪ್ರಶಂಸೆ ವ್ಯಕ್ತಪಡಿಸಲಾಗುತ್ತಿದೆ.