Connect with us

    LATEST NEWS

    ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸ್ಯಾಮ್ ಪೀಟರ್ ವಶಕ್ಕೆ ಪಡೆಯಲು ಮಂಗಳೂರಿಗೆ ಸಿಬಿಐ

    ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸ್ಯಾಮ್ ಪೀಟರ್ ವಶಕ್ಕೆ ಪಡೆಯಲು ಮಂಗಳೂರಿಗೆ ಸಿಬಿಐ

    ಮಂಗಳೂರು ಆಗಸ್ಟ್ 21: ಕಾರಿಗೆ ಕೇಂದ್ರೀಯ ತನಿಖಾ ಸಂಸ್ಥೆಯ ನೇಮ್ ಬೋರ್ಡ್ ಅಳವಡಿಸಿ ದರೋಡೆಗೆ ಸಂಚು ರೂಪಿಸಿದ ತಂಡ ಒಂದನ್ನು ಮಂಗಳೂರು ಪೊಲೀಸರು ಇತ್ತೀಚೆಗೆ ಬಂದಿಸಿದ್ದರು . ಈ ಖತರ್ ನಾಕ್ ತಂಡದ ಮಾಸ್ಟರ್ ಮೈಂಡ್ ಟಿ. ಸ್ಯಾಮ್ ಪೀಟರ್(53) ಒಬ್ಬ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಂಬುದು ಬೆಳಕಿಗೆ ಬಂದಿದೆ. ದೇಶದ ನಾನಾ ಭಾಗಗಳಲ್ಲಿ ಸ್ಯಾಮ್ ಪೀಟರ್ ನ ವಿರುದ್ಧ ವಂಚನ್ ಪ್ರಕರಣ ದಾಖಲಾಗಿದ್ದು ಆತನನ್ನು ವಶಕ್ಕೆ ಪಡೆಯಲು ಸಿಬಿಐ ತಂಡ ಮಂಗಳೂರಿಗೆ ಆಗಮಿಸಲಿದೆ.

    ಸ್ವಾತಂತ್ರ್ತೋತ್ಸವದ ಬಂದೋಬಸ್ತ್ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನ ಪಂಪುವೆಲ್ ವೃತ್ತದ ಬಳಿಯಿರುವ ಲಾಡ್ಜ್ ಒಂದರಲ್ಲಿ ಅನುಮಾನಾಸ್ಪದ‌ ವ್ಯಕ್ತಿಗಳು ಇರುವ ಬಗ್ಗೆ ಮಂಗಳೂರು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಧಾಳಿ ನಡೆಸಿದ ಸಂದರ್ಭದಲ್ಲಿ 8 ಆರೋಪಿಗಳು ಅಪರಾಧ ಕೃತ್ಯಕ್ಕೆ ಸಂಚುರೂಪಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿಗಳು ಕೇಂದ್ರೀಯ ತನಿಖಾ ಸಂಸ್ಥೆಯ ನೇಮ್ ಬೋರ್ಡ್ ಅಳವಡಿಸಿರುವ ಕಾರಿನಲ್ಲಿ ಬಂದಿರುವುದು ಪತ್ತೆಹಚ್ಚಲಾಗಿತ್ತು.

    ಈ ತಂಡ ಪ್ರಭಾವಿ ವ್ಯಕ್ತಿಗಳನ್ನು ಬೆದರಿಸಿ ಹಣ ವಸೂಲಿ ಮಾಡುವ ದಂಧೆಯಲ್ಲಿ ನಿರತರಾಗಿರುವುದು ತನಿಖೆಯಿಂದ ತಿಳಿದುಬಂದಿತ್ತು. ಬಂಧಿತರಲ್ಲಿ ಪ್ರಮುಖ ಆರೋಪಿಯಾಗಿರುವ ಕೇರಳ ಮೂಲದ ಸ್ಯಾಮ್ ಪೀಟರ್ ಎಂಬಾತನಿಗೆ ಪಶ್ಚಿಮ ಬಂಗಾಳ, ಭುವನೇಶ್ವರ ಮೊದಲಾದ ಕಡೆಯಲ್ಲೂ ಸಂಪರ್ಕ ಹೊಂದಿದ್ದು ಈತ ಸ್ಥಳೀಯ ಸಂಪರ್ಕದ ಮೂಲಕ ಮಂಗಳೂರಿಗೆ ಬಂದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿತ್ತು.

    ದೇಶದ ನಾನಾ ಕಡೆ ಸ್ಯಾಮ್ ಪೀಟರ್ ಮೇಲೆ ಪ್ರಕರಣ ದಾಖಲಾಗಿದೆ.ಮಹಾರಾಷ್ಟ್ರದಲ್ಲೂ ಈತ ನಿರಂತರ ಲೂಟಿ ಚಟುವಟಿಕೆಯಲ್ಲಿ ತೊಡಗಿಸಿ, ತಲೆಮರೆಸಿಕೊಂಡ ಕಾರಣ ಮಹಾರಾಷ್ಟ್ರ ಸರಕಾರ ಮೋಸ್ಟ್ ವಾಂಟೆಡ್ ಎಂದು ಘೋಷಿಸಿದೆ . ಈತನನ್ನು ‘ಮೋಸ್ಟ್ ವಾಂಟೆಡ್ ಕ್ರಿಮಿನಲ್’ ಎಂದು ಘೋಷಿಸಿದ ಬಳಿಕ ಈತನ ಬಂಧನಕ್ಕೆ ಸಿಸಿಬಿ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಈತ ವಿದೇಶಕ್ಕೆ ಹಾರಿರಬಹುದೆಂಬ ಸಂಶಯ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಹಲವು ಸಮಯದಿಂದ ಶೋಧ ಕಾರ್ಯವೂ ನಡೆದಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply