ಪುತ್ತೂರು ಅಗಸ್ಟ್ 09: ತೆಂಗಿನ ಕಾಯಿ ಕೀಳುವ ಕಾಯಕ ಮಾಡುತ್ತಿದ್ದ ಮಹಿಳೆಯೊಬ್ಬರು ತೆಂಗಿನ ಮರದಿಂದ ಬಿದ್ದು ಸಾವನಪ್ಪಿದ ಘಟನೆ ಸವಣೂರು ಸಮೀಪದ ಪುಣ್ಚಪ್ಪಾಡಿ ಎಂಬಲ್ಲಿ ನಡೆದಿದೆ.

ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದ ಸುಚಿತ್ರ (30) ಸಾವಿಗೀಡಾದ ಮಹಿಳೆ, ಮಹಿಳೆಯಾಗಿ ತೆಂಗಿನ ಮರ ಹತ್ತುವ ಕಾಯಕದಲ್ಲಿ ತೊಡಗಿ ಹೆಸರುವಾಸಿಯಾಗಿದ್ದ ಸುಚಿತ್ರ. ಸುಚಿತ್ರ ರವರ ಈ ಕಾರ್ಯಕ್ಕೆ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು. ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.





