ಮಂಗಳೂರು ಅಗಸ್ಟ್ 09 : ಗಂಡ ಹೆಂಡತಿ ನಡುವೆ ನಡೆದ ಜಗಳದ ಬಳಿಕ ಇದೀಗ ಹೆಂಡತಿ ತನ್ನ ಗಂಡ ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನವನ್ನು ಕದ್ದಿದ್ದಾನೆ ಎಂದು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ವರದಿಯಾಗಿದೆ.

ಸಾಂಧರ್ಬಿಕ ಚಿತ್ರ

ರೆನಿಶಾ ನೊರೊನ್ಹಾ ದೂರು ನೀಡಿದ ಮಹಿಳೆ. ಆಕೆಯ ಪತಿ ಮೊಹಮ್ಮದ್ ಇಲಿಯಾಸ್ ಆರೋಪಿ. ಆತನಿಗೆ ಸಹಕರಿಸಿದ ವ್ಯಕ್ತಿಯ ವಿರುದ್ಧವೂ ದೂರು ದಾಖಲಾಗಿದೆ.

ದೂರಿನಲ್ಲಿ ಮಹಿಳೆಯ ತನ್ನ ಗಂಡನೊಂದಿಗೆ ಮಂಗಳೂರು ಕೆಪಿಟಿ ವ್ಯಾಸನಗರದ ಫ್ಲಾಟ್ನಲ್ಲಿ ವಾಸವಿದ್ದು, ಇತ್ತೀಚೆಗೆ ತನಗೆ ಹಾಗೂ ಪತಿ ನಡುವೆ ಗಲಾಟೆಯಾದ ಕಾರಣ ನಾನು ತಾಯಿಯ ಮನೆಯಲ್ಲಿದ್ದೆ, ಗಂಡ ಇರುವ ಪ್ಲ್ಯಾಟ್ ನಲ್ಲಿ ತನಗೆ ಸೇರಿದ್ದು ಸುಮಾರ 75 ಪವನ್ ಚಿನ್ನವನ್ನು ಲಾಕರ್ ನಲ್ಲಿ ಇಟ್ಟಿದ್ದು, ಇತ್ತೀಚೆಗೆ ಪ್ಲ್ಯಾಟ್ ಗೆ ತೆರಳಿ ನೋಡಿದಾಗ ಚಿನ್ನ ನಾಪತ್ತೆಯಾಗಿದ್ದು, ಅದನ್ನು ನನ್ನ ಗಂಡನೇ ಕದ್ದಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Share Information