Connect with us

  LATEST NEWS

  ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ, ಯುವತಿಗೆ ಚೂರಿ ಇರಿದು ಪರಾರಿ..!  

    ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಟೆಕ್ಕಿ ಯುವತಿಗೆ ಯುವಕನೋರ್ವ ವಂಚಿಸಿದ್ದು, ಮದುವೆಯಾಗುವಂತೆ ಒತ್ತಾಯಿಸಿದಾಗ ಯುವತಿಗೆ ಇರಿದು ಯುವಕ ಪರಾರಿಯಾಗಿದ್ದಾನೆ.

  ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾದ್ದ 27 ವರ್ಷದ ಯುವತಿಗೆ ಜಿಮ್ ನಲ್ಲಿ ಆದಿತ್ಯ ಸಿಂಗ್  ಎಂಬ ಯುವಕನ ಪರಿಚಯವಾಗಿದೆ. ಬಳಿಕ ಇಬ್ಬರು ಲಿವಿಂಗ್ ರಿಲೇಷನ್​ಶಿಪ್​​ನಲ್ಲಿದ್ದರು. ಹುಡುಗಿಯು ಆದಿತ್ಯನಿಗೆ ಎಲ್ಲವನ್ನೂ ಧಾರೆ ಎರೆದು ಕೊಟ್ಟಿದ್ದಳು.  ಬಳಿಕ ಮದುವೆಯಾಗುವಂತೆ ಯುವತಿ ಕೇಳಿದ್ದಕ್ಕೆ ಆದಿತ್ಯ ಸಿಂಗ್​​ ನಿರಾಕರಿಸಿದ್ದಾನೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಯುವತಿ ಮೇಲೆ ಆದಿತ್ಯ ಸಿಂಗ್  ಹಲ್ಲೆ ನಡೆಸಿ ಚಾಕುವಿನಿಂದ ಇರಿದು  ಬಳಿಕ ಪರಾರಿಯಾಗಿದ್ದಾನೆ.  ಈ ಕುರಿತು ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply