LATEST NEWS
ರೇಪ್ ಮಾಡಿ, ಚಲಿಸುವ ರೈಲಿನಿಂದ ಹೊರಗೆ ಎಸೆದ ಕೀಚಕರು

ಮುಂಬೈ, ಡಿಸೆಂಬರ್ 25 : ರೇಪ್ ಮಾಡಿ, ರೈಲಿನಿಂದ ಹೊರಗೆ ಎಸೆದಿರುವ ಘಟನೆ ಮಹಾರಾಷ್ಟ್ರದ ನವೀ ಮುಂಬೈನಲ್ಲಿ ವರದಿಯಾಗಿದೆ. ಯುವತಿಯು ನಗರದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು.
ವಾಶಿ ಕ್ರೀಕ್ ಸೇತುವೆಯ ಸಮೀಪವಿರುವ ರೈಲ್ವೆ ಹಳಿಗಳ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯ ದೇಹ ಪತ್ತೆಯಾಗಿದೆ. ತಕ್ಷಣ ರೈಲ್ವೆ ಅಧಿಕಾರಿಗಳು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ಮೊದಲು ವಾಶಿ ಪುರಸಭೆ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು.

ಯುವತಿಯು 20 ವರ್ಷ ವಯಸ್ಸಿನಳಾಗಿದ್ದು, ಟಿಟ್ವಾಲಾ ನಿವಾಸಿಯಾಗಿದ್ದಾಳೆ. ಯುವತಿ ಪೊವಾಯ್ನಲ್ಲಿ ಗೃಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದುದ್ದಾಗಿ ವರದಿಯಾಗಿದೆ. ಅತ್ಯಾಚಾರವೆಸಗಿರುವ ವ್ಯಕ್ತಿ, ಯುವತಿಯನ್ನು ಕೊಲೆ ಮಾಡುವ ಉದ್ದೇಶದಿಂದ ರೈಲಿನಿಂದ ಹೊರಗೆಸದಿರಬಹುದು ಎನ್ನಲಾಗಿದೆ. ಸದ್ಯ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಕೆ ಚೇತರಿಸಿಕೊಂಡ ನಂತರ ವಿವರವಾದ ಹೇಳಿಕೆಯನ್ನು ದಾಖಲಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.