DAKSHINA KANNADA
ಅಪರಿಚಿತ ವ್ಯಕ್ತಿ ಮಹಿಳೆಗೆ ಹಲ್ಲೆ ನಡೆಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ
ಅಪರಿಚಿತ ವ್ಯಕ್ತಿ ಮಹಿಳೆಗೆ ಹಲ್ಲೆ ನಡೆಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ
ಮುಲ್ಕಿ ಅಕ್ಟೋಬರ್ 25: ಮೆಸ್ಕಾಂ ಬಿಲ್ಲು ಪರಿಶೀಲಿಸುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಬಂದು ಮಹಿಳೆಗೆ ಹಲ್ಲೆ ನಡೆಸಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡು ಮಹಿಳೆಯನ್ನು ಕೋಲ್ನಾಡು ಗುತ್ತು ನಿವಾಸಿ ಶಾರದಾ ಶೆಟ್ಟಿ ಎಂದು ಗುರುತಿಸಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ರಾಷ್ಟ್ರೀಯ ಹೆದ್ದಾರಿ ಚಂದ್ರ ಮೌಳೀಶ್ವರ ದೇವಸ್ಥಾನದ ಕ್ರಾಸ್ ಬಳಿಯ ಕೋಲ್ನಾಡು ಗುತ್ತುವಿನ ಪ್ರಭಾಕರ ಶೆಟ್ಟಿ ಎಂಬವರ ಬಂದು ಬಾಗಿಲು ತಟ್ಟಿದ್ದಾನೆ. ಈ ಸಂದರ್ಭ ಮನೆಯಲ್ಲಿ ಶಾರದಾ ಶೆಟ್ಟಿ ಟಿವಿ ನೋಡುತ್ತಿದ್ದರು. ಮನೆಗೆ ಬಂದ ವ್ಯಕ್ತಿ ಶಾರದಾ ಬಳಿ ನಾವು ಮೆಸ್ಕಾಂ ಸಿಬ್ಬಂದಿ ಎಂದು ನಿಮ್ಮ ಕರೆಂಟ್ ಬಿಲ್ ಪರಿಶೀಲಿಸಲು ಬಂದಿದ್ದೇನೆ ಎಂದು ಹೇಳಿದ್ದಾನೆ.
ಶಾರದಾ ಶೆಟ್ಟಿಯವರಿಗೆ ಸಂಶಯ ಬಂದಿದ್ದು ವ್ಯಕ್ತಿಯನ್ನು ಪ್ರಶ್ನಿಸುವ ಮೊದಲೇ ವ್ಯಕ್ತಿ ಶಾರದಾರವರ ಕರಿಮಣಿ ಎಳೆದಿದ್ದಾನೆ. ಕುತ್ತಿಗೆ ಅಮುಕಿ ಶಾರದಾ ಶೆಟ್ಟಿ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿ ಮನೆಯ ಕೋಣೆಯ ಮೇಜಿನ ಡ್ರಾವರಿನಲ್ಲಿ ಮಗಳ ಮದುವೆಗೆ ತೆಗೆದಿಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಶಾರದಾಶೆಟ್ಟಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login