LATEST NEWS
ಪಂಜಾಬ್ – ಡ್ರಗ್ಸ್ ದಂಧೆಯಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್

ಪಂಜಾಬ್ ಎಪ್ರಿಲ್ 04: ಪಂಜಾಬ್ ನ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಮಾದಕ ವಸ್ತು ಹೆರಾಯಿನ್ ನೊಂದಿಗೆ ಅರೆಸ್ಟ್ ಆಗಿದ್ದಾರೆ. ಮಹಿಳಾ ಕಾನ್ಸ್ಟೇಬಲ್ ಬಳಿ ಬರೋಬ್ಬರಿ 17.71 ಗ್ರಾಂ ಹೆರಾಯಿನ್ ಸಿಕ್ಕಿದ್ದು, ಇದೀಗ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಬಂಧಿತ ಆರೋಪಿಯನ್ನ ಅಮನ್ದೀಪ್ ಕೌರ್ ಎಂದು ಗುರುತಿಸಲಾಗಿದೆ, ಈಕೆಯ ಥಾರ್ ಕಾರಿನಲ್ಲಿ ಸುಮಾರು 17.7 ಗ್ರಾಂನಷ್ಟು ಮಾದಕದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಬತಿಂದಾದ ಡಿಎಸ್ಪಿ ಹರ್ಬನ್ ಸಿಂಗ್ ಹೇಳಿದ್ದಾರೆ. ಮಹಿಳಾ ಪೊಲೀಸ್ ಬಳಿ ಮಾದಕದ್ರವ್ಯ ಇರುವ ಸುಳಿವು ಪೊಲೀಸ್ ಇಲಾಖೆಗೆ ದೊರೆತಿದೆ ಈ ವೇಳೆ ತಪಾಸಣೆಗೆ ಇಳಿದ ಪಂಜಾಬ್ ಪೊಲೀಸರಿಗೆ ಮಹಿಳಾ ಪೊಲೀಸ್ ಪೇದೆಯ ವಾಹನದ ಗೀಯರ್ ಶಿಫ್ಟ್ನಲ್ಲಿ ಬಾಕ್ಸ್ ಒಂದು ಪತ್ತೆಯಾಗಿದೆ ಇದನ್ನು ತೆಗೆದು ನೋಡಿದಾಗ ಅದರಲ್ಲಿ ಹೆರಾಯಿನ್ ಇದ್ದಿದ್ದು ಪತ್ತೆಯಾಗಿದೆ.

ಐಜಿಪಿ ಸುಖಚೈನ್ ಸಿಂಗ್ ಈ ಬಗ್ಗೆ ಮಾತನಾಡಿದ್ದ ಈಗಾಗಲೇ ಮಹಿಳಾ ಅಧಿಕಾರಿಯನ್ನು ಆಕೆಯ ಸ್ಥಾನದಿಂದ ವಜಾಗೊಳಿಸಲಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನು ಪಂಜಾಬ್ನ ಮುಖ್ಯಮಂತ್ರಿ ಭಗವಂತ್ ಮಾನ್, ಈ ರೀತಿಯಾಗಿ ಅಕ್ರಮ ವ್ಯವಹಾರಗಳ್ಲಿ ತೊಡಗುವ ಯಾವುದೇ ಅಧಿಕಾರಿಗಳಿರಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ. ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇನ್ನು ಪೊಲೀಸ್ ಅಧಿಕಾರಿ ಸ್ಥಾನದಿಂದ ವಜಾಗೊಂಡಿರುವ ಕೌರ್, ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆ್ಯಕ್ಟಿವ್ ಇದ್ದರು. ತಮ್ಮ ಎಸ್ಯುವಿ ಥಾರ್ ಜೊತೆಗೆ ತೆಗೆದುಕೊಂಡಿರುವ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಿದ್ದರು. ಇನ್ನು ಒಂದು ವಿಚಾರವೆಂದರೆ ಆ ಕಾರಿನ ಮೇಲೆ ಪಂಜಾಬ್ ಪೊಲೀಸ್ ಎಂಬ ಸ್ಟಿಕರ್ ಕೂಡ ಇರುತ್ತಿತ್ತು. ಸದ್ಯ ಕೌರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ. ಯಾರೊಂದಿಗೆ ಅವರು ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದರು. ಅವರ ಆಸ್ತಿ ಎಷ್ಟಿದೆ, ಸಂಪತ್ತಿನ ಮೂಲ ಯಾವುದು ಎಂಬುದನ್ನೆಲ್ಲಾ ಹುಡುಕುತ್ತಿದ್ದಾರೆ.