Connect with us

    BANTWAL

    ಪಾಣೆಮಂಗಳೂರು ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

    ಪಾಣೆಮಂಗಳೂರು, ಮೇ 22 : ಪಾಣೆಮಂಗಳೂರು ಗೂಡಿನ ಬಳಿಯ ನೇತ್ರಾವತಿ ಸೇತುವೆಯಿಂದ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಬಂಟ್ವಾಳ ತ್ಯಾಗರಾಜನಗರದ ಸವಿತಾ ಭಟ್ (67) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ವೇಳೆಗೆ ಅವರು ಸೇತುವೆಯಿಂದ ನದಿಗೆ ಹಾರಿದ್ದು, ಕೂಡಲೇ ಸ್ಥಳೀಯ ಈಜುಪಟುಗಳು ಧಾವಿಸಿ ಅವರನ್ನು ರಕ್ಷಿಸಲು ಪ್ರಯತ್ನಪಟ್ಟರು.

    ಆದರೆ ಆ ವೇಳೆಗಾಗಲೇ ಮಹಿಳೆ ಮೃತಪಟ್ಟಿದ್ದರು. ಆತ್ಮಹತ್ಯೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ಮೃತ ಮಹಿಳೆ ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply