LATEST NEWS
ವಿಮಾನದಲ್ಲಿ ವಿಷಕಾರಿ ಹಾವುಗಳನ್ನು ಸಾಗಿಸುತ್ತಿದ್ದ ಮಹಿಳೆ ಬಂಧನ

ಚೆನ್ನೈ, ಮೇ 01: ವಿಷಕಾರಿ ಹಾವುಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಮಹಿಳೆಯನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಮಲೇಷ್ಯಾದಿಂದ ಚೆನ್ನೈಗೆ ಬಂದ ಮಹಿಳೆಯ ಬ್ಯಾಗ್‍ನ್ನು ಪರಿಶೀಲಿಸಿದಾಗ ಅದರಲ್ಲಿ ವಿಷಕಾರಿ 22 ಜೀವಂತ ಹಾವುಗಳು ಪತ್ತೆಯಾಗಿವೆ.
ಬ್ಯಾಗ್‍ನಲ್ಲಿ ಪ್ಲಾಸ್ಟಿಕ್ ವಸ್ತುಗಳ ಜೊತೆಗೆ ಈ ಹಾವುಗಳನ್ನು ತರಲಾಗಿತ್ತು. ಮಲೇಷ್ಯಾದ ಕೋಲಾಲಂಪುರದಲ್ಲಿ ಖರೀದಿಸಿ ಎಕೆ-13 ವಿಮಾನದಲ್ಲಿ ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವುಗಳನ್ನು ವಶಪಡಿಸಿಕೊಂಡು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ವಿಷಯಕಾರಿ ಹಾವುಗಳೆಂದು ಗೊತ್ತಾಗುತ್ತಿದ್ದಂತೆ ಕಸ್ಟಮ್ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಮತ್ತೊಂದು ಸೂಟ್ಕೆಸ್‍ನಲ್ಲಿ ಗೋಸುಂಬೆ ಇತ್ತು. ಅದನ್ನು ಕೂಡ ವಶಕ್ಕೆ ಪಡೆದು ಮಹಿಳೆಯನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.