LATEST NEWS
ಕೊಟ್ಟಾಯಂ – ಇಬ್ಬರು ಮಕ್ಕಳ ಜೊತೆ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಕೊಟ್ಟಾಯಂ ಫೆಬ್ರವರಿ 28: ಮಹಿಳೆಯೊಬ್ಬರ ಚಲಿಸುತ್ತಿದ್ದ ರೈಲಿನ ಮುಂದೆ ತನ್ನ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಬೆಳಿಗ್ಗೆ 5.15 ರ ಸುಮಾರಿಗೆ ಕೊಟ್ಟಾಯಂನ ಎಟ್ಟುಮನೂರಿನಲ್ಲಿ ರೈಲು ಹಳಿಯ ಬಳಿ ನಡೆದಿದೆ. ಮೂವರು ಕೊಟ್ಟಾಯಂ ನಿಲಂಬೂರು ಎಕ್ಸಪ್ರೇಸ್ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರನ್ನು ಶೈನಿ ಕುರಿಯಾಕೋಸ್ (42) ಮತ್ತು ಅವರ ಪುತ್ರಿಯರಾದ ಇವಾನಾ ಮರಿಯಾ ನೋಬಿ (10) ಮತ್ತು ಅಲೀನಾ ಎಲಿಸಬಾತ್ ನೋಬಿ (11) ಎಂದು ಗುರುತಿಸಲಾಗಿದೆ. ಕೌಟುಂಬಿಕ ಸಮಸ್ಯೆಯಿಂದಾಗಿ ತನ್ನ ಪತಿಯಿಂದ ಬೇರ್ಪಟ್ಟು ತನ್ನ ತಂದೆಯ ಜೊತೆ ಪರೋಲಿಕಲ್ ಎಂಬಲ್ಲಿ ಮಹಿಳೆ ವಾಸವಿದ್ದರು ಎಂದು ಹೇಳಲಾಗಿದೆ. ಮಹಿಳೆಯ ಪತಿ ವಿದೇಶದಲ್ಲಿದ್ದು, ಒಬ್ಬ ಮಗ ತಿರುವನಂತಪುರಂ ನಲ್ಲಿ ಓದುತ್ತಿದ್ದಾನೆ.
