LATEST NEWS
ಟಿ.ಜೆ. ಅಬ್ರಾಹಂ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದು ಖಚಿತ – ಪ್ರಮೋದ್ ಮಧ್ವರಾಜ್

ಟಿ.ಜೆ. ಅಬ್ರಾಹಂ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದು ಖಚಿತ – ಪ್ರಮೋದ್ ಮಧ್ವರಾಜ್
ಉಡುಪಿ ಮಾರ್ಚ್ 29: ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಟಿ ಜೆ ಆಬ್ರಾಹಂ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದು ಖಚಿತ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಟೆ.ಜೆ. ಅಬ್ರಾಹಂ ಮೇಲೆ ಕಿಡಿಕಾರಿದ್ದಾರೆ. ನನಗೆ ಗಡುವು ಕೊಡಲು ಅಬ್ರಹಂ ಯಾರು? ಹೂ ಈಸ್ ಹೀ? ಎಂದು ಅಬ್ರಹಾಂ ವಿರುದ್ಧ ಸಚಿವ ಮಧ್ವರಾಜ್ ಕೆಂಡಾಮಂಡಲವಾದರು. ನಾನು ಆರ್ ಟಿ ಐ ಮೂಲಕ ಮಾಹಿತಿ ಕಲೆ ಹಾಕುತ್ತಿದ್ದೇನೆ, ದೆಹಲಿಯ ಹಣಕಾಸು ಇಲಾಖೆ ಯಿಂದ ಕಡತ ಬಂದ ತಕ್ಷಣ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ ಎಂದು ತಿಳಿಸಿದರು. ಟಿ.ಜೆ ಅಬ್ರಾಹಂ ಸುಪ್ರೀಂ ಕೋರ್ಟಿಂದ ದಂಡ ಹಾಕಿಸಿಕೊಂಡ ವ್ಯಕ್ತಿ, ಬೆಂಗಳೂರಿನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದವರು. ನನ್ನ ದಾಖಲೆಗಳು ಸಮರ್ಪಕವಾಗಿದ್ದು ಯಾವುದೇ ರೀತಿ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಪ್ರಮೋದ್ ಮಧ್ವರಾಜ್ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ವದಂತಿಯನ್ನು ಅಲ್ಲಗೆಳೆದ ಅವರು ಆಸ್ಕರ್ ಫೆರ್ನಾಂಡೀಸ್ ರನ್ನು ಬೇಟಿಯಾಗಲು ದೆಹಲಿಗೆ ಹೋಗಿದ್ದೆ, ಬಿಜೆಪಿ ವರಿಷ್ಟರನ್ನು ಬೇಟಿಯಾದೆ ಅನ್ನೋದು ಬರೇ ಸುಳ್ಳು ಎಂದು ತಿಳಿಸಿದರು, ಈ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಅಂತರದಲ್ಲಿ ಗೆಲ್ತೇನೆ ಎಂದು ಹೇಳಿದ ಅವರು ಕಾಂಗ್ರೇಸ್ ಗೆ ದ್ರೋಹಬಗೆಯಲ್ಲ .ಕಾರ್ಯಕರ್ತರಿಗೆ ಮೋಸ ಮಾಡಲ್ಲ ಎಂದರು. ಕಾಂಗ್ರೇಸ್ ಪಕ್ಷದಲ್ಲಿಯೇ ಅತೀದೊಡ್ಡ ಗೆಲುವು ನನ್ನದಾಗುತ್ತೆ, ನನ್ನ ವಿರುದ್ದ ಯಾರೇ ಪ್ರತಿಸ್ಪರ್ಧಿ ಆದ್ರೂ ಡೋಂಟ್ ಕೇರ್ ಎಂದು ಹೇಳಿದರು.