LATEST NEWS
ಮಹಾವೀರ ಜಯಂತಿ – ಮಂಗಳೂರಿನ ಜಿನಮಂದಿರದಲ್ಲಿ ವಿಶೇಷ ಪೂಜೆ
ಮಹಾವೀರ ಜಯಂತಿ – ಮಂಗಳೂರಿನ ಜಿನಮಂದಿರದಲ್ಲಿ ವಿಶೇಷ ಪೂಜೆ
ಮಂಗಳೂರು ಮಾರ್ಚ್ 29: ಇಂದು ದೇಶದಾದ್ಯಂತ ಭಗವಾನ್ ಮಹಾವೀರರ ಜಯಂತಿಯನ್ನು ವೈಭವಪೂರ್ಣವಾಗಿ ಆಚರಿಸಲಾಗುತ್ತಿದೆ. ಮಂಗಳೂರಿನಲ್ಲಿ ಮಹಾವೀರ ಜಯಂತಿಯನ್ನು ಶೃದ್ದಾ ಭಕ್ತಿಗಳಿಂದ ಆಚರಿಸಲಾಯಿತು. 2,617ನೇ ಮಹಾವೀರ ಜಯಂತಿಯನ್ನು ಮಂಗಳೂರು ನಗರದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದಲ್ಲಿರುವ ಏಕೈಕ ಜಿನಾಲಯ ಶ್ರೀ ಆಧಿಶ್ವರ ಸ್ವಾಮಿ ಜೈನ ಬಸದಿಯಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭಗವಾನ್ ಮಹಾವೀರನಿಗೆ ಚಂದನಾಭಿಷೇಕ, ಕನಕಾಭಿಷೇಕ, ಪುಷ್ಪ ವೃಷ್ಠಿ, ಕಳಶಾಭಿಷೇಕ ಸೇರಿದಂತೆ ಅಷ್ಟ ದ್ರವ್ಯಗಳ ವಿಶೇಷ ಅಭಿಷೇಕ ನಡೆಯಿತು.
ಮಹಾವೀರರು ಬೋಧಿಸಿದ ತತ್ತ್ವಾದರ್ಶಗಳನ್ನು ಪಾಲಿಸುವ ಸುದಿನವಿದಾಗಿದೆ. ಭಗವಾನ್ ಮಹಾವೀರರು 24 ತೀರ್ಥಂಕರರಲ್ಲಿ ಕೊನೆಯವರು. ಮಹಾವೀರರ ತಂದೆ ಸಿದ್ದಾರ್ಥ ಹಾಗೂ ತಾಯಿ ತ್ರಿಶಲಾ ದೇವಿ. ಇವರ ಪೂರ್ವನಾಮ ವರ್ಧಮಾನ. ಮಹಾವೀರರು ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹವೆಂಬ ಪಂಚಶೀಲ ತತ್ತ್ವವನ್ನು ಬೋಧಿಸಿದರು. ಭಗವಾನ್ ಮಹಾವೀರರು ತಮ್ಮ ಬೋಧನೆಗಳ ಮೂಲಕ ಜನರಲ್ಲಿ ವೈಚಾರಿಕ ಬದಲಾವಣೆ ಉಂಟು ಮಾಡಿದರು.
You must be logged in to post a comment Login