Connect with us

KARNATAKA

ವಿರಾಜಪೇಟೆಯಲ್ಲಿ ಕಾಡಾನೆ ತುಳಿತಕ್ಕೆ ಕಾರ್ಮಿಕ ಸಾವು

ಮಡಿಕೇರಿ, ಫೆಬ್ರವರಿ 26: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಕಾಡಾನೆ ತುಳಿದ ಪರಿಣಾಮ ತಲೆ ಛಿದ್ರಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ  ನಡೆದಿದೆ.ಮೃತಪಟ್ಟ ಕಾರ್ಮಿಕನನ್ನು ಸಂದೀಪ್ (22 ವ) ಎಂದು ಗುರುತಿಸಲಾಗಿದೆ. ಸಿದ್ದಾಪುರ ಸಮೀಪ ಬಿಬಿಟಿಸಿ ಬೀಟಿಕಾಡು ತೋಟದಲ್ಲಿಈ ಘಟನೆ ನಡೆದಿದ್ದು, ಕಾಫಿ ಪಲ್ಪಿಂಗ್ ಕಣದಲ್ಲಿ ಸಂದೀಪ್ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ.

ಕಳೆದ ರಾತ್ರಿ ಸಂದೀಪ್ ನಿದ್ರೆಯಲ್ಲಿದ್ದ ಸಂದರ್ಭ ಹಠಾತ್ತನೆ ಬಂದ ಕಾಡಾನೆ ದಾಳಿ ಮಾಡಿದೆ. ಕಾಡಾನೆ ತುಳಿತಕ್ಕೆ ತಲೆ ಛಿದ್ರಗೊಂಡು ಸ್ಥಳದಲ್ಲೇ ಕಾರ್ಮಿಕ ಸಂದೀಪ್ ಮೃತಪಟ್ಟಿದ್ದಾನೆ. ಜೊತೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ರಾಜು ಅದೃಷ್ಡವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ. ಕಾಡಾನೆ ಹಾವಳಿ ತಡೆಗೆ ಶಾಶ್ವತವಾಗಿ ಕಾರ್ಮಿಕರು ಒತ್ತಾಯ ನಡೆಸಿದರು.ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.