LATEST NEWS
ಕಬಾಲಿ ಆಕ್ರೋಶಕ್ಕೆ ಬಸ್ ನ್ನು 8 ಕಿಲೋ ಮೀಟರ್ ರಿವರ್ಸ್ ಗೇರ್ ಕೊಂಡೊಯ್ದ ಬಸ್ ಡ್ರೈವರ್
ಕೇರಳ ನವೆಂಬರ್ 17: ಕಾಡು ಪ್ರಾಣಿ ಮತ್ತು ಮನುಷ್ಯರ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕೇರಳದಲ್ಲಿ ‘ಕಬಾಲಿ’ ಎಂಬ ಹೆಸರಿನ ಕಾಡಾನೆ ಬಸ್ ಒಂದರ ಮೇಲೆ ಅಟ್ಯಾಕ್ ಮಾಡಲು ಹೋಗಿದ್ದು, ಬಸ್ ಚಾಲಕ ಬಸ್ ನ್ನು ರಿವರ್ಸ್ ಗೇರ್ ನಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗಿ ಪ್ರಯಾಣಿಕರ ಜೀವನನ್ನು ಕಾಪಾಡಿದ್ದಾನೆ.
ಈ ಘಟನೆ ನಡೆದಿದ್ದು, ಕೇರಳದ ಚಾಲಕುಡಿ-ವಾಲ್‌ಪ್ಪರೈ ಮಾರ್ಗದಲ್ಲಿ, ಈ ವಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ ನ ಎದುರು ಒಂಟಿ ಸಲಗ ಬಂದಿದ್ದು, ಬಸ್ ನ್ನು ಅಟ್ಟಿಸಿಕೊಂಡು ಬಂದಿದೆ. ಕಾಡಿನ ಮಾರ್ಗವಾದ ಕಾರಣ ರಸ್ತೆ ಕಿರಿದಾಗಿದ್ದು, ಬಸ್ ನ್ನು ತಿರುಗಿಸಲು ಚಾಲಕನಿಗೆ ಸಾಧ್ಯವಾಗಿಲ್ಲ. ಈ ಹಿನ್ನಲೆ ಪ್ರಯಾಣಿಕರ ರಕ್ಷಣೆಗಾಗಿ ಬಸ್ ಡ್ರೈವರ್ ಬಸ್ ನ್ನು ರಿವರ್ಸ್ ಗೇರ್ ನಲ್ಲಿಯೇ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಆನೆ ಬಸ್ ನ್ನು ಸುಮಾರು 8 ಕಿಲೋ ಮೀಟರ್ ದೂರದವರೆಗೆ ಹಿಂಬಾಲಿಸಿದೆ.
ಬಸ್ಸಿನ ಹಿಂದೆ ಬಂದಿದ್ದ ಪ್ರವಾಸಿ ವಾಹನಗಳನ್ನು ಬೇರೆಡೆಗೆ ತಿರುಗಿಸಲಾಯಿತು.ಸುಮಾರು ಒಂದು ಗಂಟೆಗಳ ಕಾಲ ಬಸ್ ಹಿಂದೆ ಬಂದಿದ್ದ ಒಂಟಿ ಆನೆ ಅನಕ್ಕಯಂ ತಲುಪುವಷ್ಟರಲ್ಲಿ ಕಾಡಿಗೆ ಹೊಗಿದ್ದು. ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಲವು ವಾರಗಳಿಂದ ಅನಕ್ಕಯಂ ಮಾರ್ಗದಲ್ಲಿ ಸಂಚರಿಸುವವರಿಗೆ ಈ ಆನೆ ಬೆದರಿಕೆ ಒಡ್ಡುತ್ತಿದೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆಯ ಜೀಪಿನ ಮೇಲೆ ದಾಳಿ ನಡೆಸಿತ್ತು. ಅಂಬಲಪ್ಪರ ಕೆಎಸ್‌ಇಬಿ ಕಚೇರಿ ಮೇಲೂ ಆನೆ ದಾಳಿ ಮಾಡಿದೆ. ಎರಡು ವರ್ಷಗಳಿಂದ ಆನೆ ಈ ಪ್ರದೇಶಕ್ಕೆ ಆಗಾಗ ಬರುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.