40 ಅಡಿ ಆಳದ ಬಾವಿಗೆ ಬಿದ್ದ ಅಪರೂಪದ ಕರಿಚಿರತೆ

ಉಡುಪಿ ನವೆಂಬರ್ 29: ಉಡುಪಿಯಲ್ಲಿ 40 ಅಡಿ ಆಳದ ಬಾವಿಗೆ ಅಪರೂಪದ ಕರಿ ಚಿರತೆಯೊಂದು ಬಿದ್ದಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ.

ಉಡುಪಿಯ ಬೈಂದೂರು ತಾಲೂಕು ವ್ಯಾಪ್ತಿಯ ಕೆರಾಡಿ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಇಲ್ಲಿಯ ಯಕ್ಕನಕಟ್ಟೆಯ ಸಂತೋಷ್ ಶೆಟ್ಟಿ ಅವರ ಮನೆಯ ಬಾವಿಗೆ ಈ ಅಪರೂಪದ ಕರಿ ಚಿರತೆ ಬಿದ್ದಿದೆ.

ಆಹಾರ ಅರಸುತ್ತಾ ಜನವಸತಿಯತ್ತ ಪ್ರದೇಶದತ್ತ ಬಂದ ಈ ಅಪರೂಪದ ಕರಿ ಚಿರತೆ ರಾತ್ರಿ ಸಮಯದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದಿದೆ.

ಬೆಳಿಗ್ಗೆ ಬಾವಿಯಲ್ಲಿ ಕರಿಚಿರತೆ ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕುಂದಾಪುರ, ಬೈಂದೂರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಡಿಎಫ್‌ಓ ಪ್ರಭಾಕರನ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಬಾವಿಯೊಳಗೆ ಬೋನು ಇಳಿಬಿಟ್ಟು ಚಿರತೆಯನ್ನು ಹಿಡಿದು ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 6 ವರ್ಷ ಪ್ರಾಯದ ಈ ಕರಿಚಿರತೆಯನ್ನು ಸುರಕ್ಷಿತವಾಗಿ ಮೂಕಾಂಬಿಕಾ ಅಭಯಾರಣ್ಯಕ್ಕೆ ಬಿಡಲಾಯಿತು.

VIDEO

2 Shares

Facebook Comments

comments