Connect with us

    LATEST NEWS

    ಬ್ಯಾಟ್​ನಿಂದ ಹೊಡಿತಾಳೆ ಹೆಂಡ್ತಿ: ಕೋರ್ಟ್​ ಮೆಟ್ಟಿಲೇರಿದ ಹೆಡ್​ಮಾಸ್ಟರ್..!

    ರಾಜಸ್ಥಾನ, ಮೇ 25: ಪುರುಷರ ಕಿರುಕುಳದಿಂದ ಮಹಿಳೆಯರು ಕೇಸ್​ ದಾಖಲಿಸುವುದನ್ನು ನೋಡಿದ್ದೇವೆ. ಆದರೆ, ರಾಜಸ್ತಾನದಲ್ಲಿ ಈ ಕೇಸ್ ಉಲ್ಟಾ ಆಗಿದೆ. ಪತ್ನಿಯೇ ತನ್ನನ್ನು ಹೊಡೆದು ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ತನಗೆ ಭದ್ರತೆ ನೀಡಬೇಕು ಎಂದು ಕೋರಿ ಮುಖ್ಯೋಪಾಧ್ಯಾಯರೊಬ್ಬರು ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

    ಸರ್ಕಾರಿ ಶಾಲೆಯ ಹೆಡ್​ಮಾಸ್ಟರ್​ ಅಜಿತ್ ಸಿಂಗ್ ಎಂಬುವರು ತನ್ನ ಪತ್ನಿಯ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ. ತನ್ನನ್ನು ಪತ್ನಿ ದೈಹಿಕವಾಗಿ ಹಿಂಸಿಸುತ್ತಿದ್ದಾಳೆ ಎಂದು ಸಿಸಿಟಿವಿ ದೃಶ್ಯಾವಳಿಗಳ ಸಮೇತ ಕೇಸ್​ ದಾಖಲಿಸಿದ್ದಾರೆ.

    ಹೆಡ್​ಮಾಸ್ಟರ್​ ಅಜಿತ್​ ಸಿಂಗ್​ ಅವರು ಸೋನೆಪತ್​ನ ಸುಮನ್​ ಎಂಬುವರ ಜೊತೆ 9 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ದಂಪತಿಗೆ 9 ವರ್ಷದ ಒಂದು ಗಂಡು ಮಗುವಿದೆ. ಆರಂಭದ ದಿನಗಳಲ್ಲಿ ಚೆನ್ನಾಗಿದ್ದ ತನ್ನ ಹೆಂಡತಿ ಒಂದು ವರ್ಷದಿಂದ ನನ್ನನ್ನು ದಿನವೂ ಹೊಡೆದು ಹಿಂಸಿಸುತ್ತಿದ್ದಾಳೆ. ಕಳೆದ 1 ವರ್ಷದಿಂದ ನನ್ನ ಹೆಂಡತಿಯ ಕಿರುಕುಳ ತಾಳಲಾಗುತ್ತಿಲ್ಲ. ಸಮಾಜಕ್ಕೆ ಅಂಜಿ ನಾನು ಈವರೆಗೂ ಸುಮ್ಮನಿದ್ದೆ. ಅಲ್ಲದೇ, ನನ್ನ ಮಗನ ಜೀವನ ಹಾಳಾಗಬಾರದು ಎಂದು ಇದನ್ನು ನಾನು ಯಾರಿಗೂ ಹೇಳಿರಲಿಲ್ಲ. ಈ ಮಧ್ಯೆ ಆಕೆಯ ಕಾಟ ಹೆಚ್ಚಾಗಿದೆ. ಒಂದು ತಿಂಗಳಿಂದ ನಾನು ಮನೆಗೇ ಹೋಗಿಲ್ಲ. ಅಜ್ಞಾತವಾಗಿ ಜೀವನ ಸಾಗಿಸುತ್ತಿದ್ದೇನೆ ಎಂದು ಅಜಿತ್​ ಸಿಂಗ್​ ಹೇಳಿಕೊಂಡಿದ್ದಾರೆ.

    ತನ್ನ ಹೆಂಡತಿ ಹಲ್ಲೆ ನಡೆಸುತ್ತಿರುವ ಮನೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಅಜಿತ್​ ಸಿಂಗ್​ ಕೋರ್ಟ್​ಗೆ ನೀಡಿದ್ದಾರೆ. ವಿಡಿಯೋದಲ್ಲಿರುವಂತೆ ಮಹಿಳೆ ಕೈಯಲ್ಲಿ ಬ್ಯಾಟ್​ ಹಿಡಿದುಕೊಂಡು ಅಜಿತ್​ ಸಿಂಗ್​ರನ್ನು ಅಟ್ಟಿಸಿಕೊಂಡು ಬಂದು ಹೊಡೆಯುತ್ತಿರುವುದು ದಾಖಲಾಗಿದೆ. ಹೊಡೆಯಬೇಡ ಎಂದು ಎಷ್ಟೇ ಕೇಳಿಕೊಂಡರೂ ಬಿಡದ ಆ ಮಹಿಳೆ ಥಳಿಸಿದ್ದಾರೆ. ಈ ವೇಳೆ ಮಗನೂ ಕೂಡ ತಂದೆಯ ಸಹಾಯಕ್ಕೆ ಬಂದರೂ ಸಹ ಅಜಿತ್​ಸಿಂಗ್​ ಮೇಲೆ ನಿರಂತರ ಹಲ್ಲೆ ನಡೆಸಿದ್ದಾಳೆ.

    ತನ್ನ ಹೆಂಡತಿ ಈ ರೀತಿ ಮಾಡಲು ಕಾರಣ ತಮ್ಮ ಮನೆ. ನನ್ನ ಹೆಸರಿನಲ್ಲಿರುವ ಮನೆಯನ್ನು ಅವಳ ಹೆಸರಿಗೆ ಮಾಡಿಸುವಂತೆ ಪ್ರತಿದಿನವೂ ತಕರಾರು ತೆಗೆಯುತ್ತಾಳೆ. ಈ ವೇಳೆ ಕೋಪಗೊಂಡು ದಿನವೂ ಹೊಡೆಯುತ್ತಾಳೆ. ಇದಕ್ಕೆ ಅಮೆರಿಕದಲ್ಲಿರುವ ಆಕೆಯ ಅಣ್ಣನ ಬೆಂಬಲವಿದೆ. ಹೀಗಾಗಿ ಆಕೆ ನನ್ನನ್ನು ಹಿಂಸಿಸುತ್ತಿದ್ದಾಳೆ ಎಂದು ಅಜಿತ್​ಸಿಂಗ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *