LATEST NEWS
ಧರ್ಮ ಬದಲಿಸಿ ಮದುವೆಯಾಗಿದ್ದವನಿಗೆ ಥಳಿಸಿದ ಹೆಂಡತಿ

ಧರ್ಮ ಬದಲಿಸಿ ಮದುವೆಯಾಗಿದ್ದವನಿಗೆ ಥಳಿಸಿದ ಹೆಂಡತಿ
ಮಂಗಳೂರು ಜೂನ್ 13: ಹಿಂದೂ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ ಯುವಕನಿಗೆ ಆತನ ಪತ್ನಿಯೇ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ತೊಕ್ಕೂಟ್ಟು ಬಳಿಯ ಕುಂಪಲದಲ್ಲಿ ಈ ಘಟನೆ ನಡೆದಿದೆ. ಹಿಂದು ಯುವತಿಯನ್ನು ಯಾಮಾರಿಸಿ ಸುಳ್ಯ ಮೂಲದ ಸಯ್ಯದ್ ಎಂಬಾತ ಮದುವೆಯಾಗಿದ್ದ. ತನ್ನ ಹೆಸರನ್ನು ಅರುಣ್ ಪೂಜಾರಿ ಎಂದು ಹೇಳಿಕೊಂಡು ಪರಿಚಯಿಸಿ ಎರಡು ವರ್ಷದ ಹಿಂದೆ ಕುಂಪಲದ ಹುಡುಗಿಯನ್ನು ಮದುವೆಯಾಗಿದ್ದನು.

ಮಂಗಳೂರಿನ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಸಯ್ಯದ್ ಗೆಳೆತನ ಸಾಧಿಸಿದ್ದ ನಂತರ ಮದುವೆಯಾಗುವುದಕ್ಕೊಸ್ಕರ ತನ್ನ ಹೆಸರನ್ನು ಅರುಣ್ ಪೂಜಾರಿ ಎಂದು ಬದಲಿಸಿ ತಾನೊಬ್ಬ ಹಿಂದೂ ಎಂದು ಹೇಳಿಕೊಂಡಿದ್ದ ಎಂದು ಹೇಳಲಾಗಿದೆ.
ಆದರೆ, ಆರು ತಿಂಗಳ ಹಿಂದೆ ಹುಡುಗ ಮುಸ್ಲಿಂ ಅನ್ನೋದು ಪತ್ನಿಗೆ ಗೊತ್ತಾಗಿ ಇಬ್ಬರೂ ಬೇರೆಯಾಗಿದ್ದರು. ಇಂದು ಮತ್ತೆ ಪತ್ನಿ ಮನೆಗೆ ಆಗಮಿಸಿದ ಸಯ್ಯದ್ ನನ್ನು ಪತ್ನಿ ಮತ್ತು ಆಕೆಯ ತಂಗಿ ಸೇರಿ ಹಿಡಿದು ಥಳಿಸಿದ್ದಾರೆ. ಬಳಿಕ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸಯ್ಯದ್ ಈ ಹಿಂದೆ ಸುಳ್ಯದಲ್ಲಿಯೂ ಮದುವೆಯಾಗಿದ್ದ ಅಂತ ತಿಳಿದುಬಂದಿದೆ.