Connect with us

    DAKSHINA KANNADA

    ಮುಸ್ಲಿಂ ಕಾರ್ಡ್ ಬಳಸಿದರೇ ಎಸ್.ಐ ?

    ಪುತ್ತೂರು,ಸೆಪ್ಟಂಬರ್ 17: ತನ್ನನ್ನು ಸಮರ್ಥಿಸಿಕೊಳ್ಳಲು ಸಂಪ್ಯ ಎಸ್.ಐ ಮುಸ್ಲಿಂ ಕಾರ್ಡ್ ಬಳಸಿದರೇ ಎನ್ನುವ ಸಂಶಯ ವ್ಯಕ್ತವಾಗಿದೆ. ಸಂಪ್ಯ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಅಬ್ದುಲ್ ಖಾದರ್ ವಿರುದ್ಧ ಹಿಂದೂಪರ ಸಂಘಟನೆಗಳು ಅಕ್ರಮ ಗೋ ಸಾಗಾಟ, ಲವ್ ಜಿಹಾದ್ ಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಆರೋಪವನ್ನು ಮಾಡುತ್ತಿದೆ. ಈ ಸಂಬಂಧ ಸೆಪ್ಟಂಬರ್ 15 ರಂದು ಹಿಂದೂ ಜಾಗರಣ ವೇದಿಕೆ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆಯೂ ನಡೆದಿತ್ತು. ಪ್ರತಿಭಟನೆಯ ಬಳಿಕ ಸೆಪ್ಟಂಬರ್ 16 ರ ಶನಿವಾರದಂದು ಮುಸ್ಲಿಂ ಯುವಜನ ಪರಿಷತ್ ಎನ್ನುವ ಸಂಘಟನೆ ಎಸ್.ಐ ಅಬ್ದಲ್ ಖಾದರ್ ಪರವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಈ ಪತ್ರಿಕೋಗೋಷ್ಠಿಯಲ್ಲಿ ಮಾತನಾಡಿದ್ದ ಯುವಜನ ಪರಿಷತ್ ನ ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ಅಶ್ರಫ್ ಕಲ್ಲೇಗ ಎಸ್.ಐ ಅಬ್ದುಲ್ ಖಾದರ್ ಒರ್ವ ದಕ್ಷ, ಪ್ರಾಮಾಣಿಕ ಹಾಗೂ ನಿಷ್ಟಾವಂತ ಪೋಲೀಸ್ ಅಧಿಕಾರಿ ಎನ್ನುವ ಶ್ವೇತಪತ್ರವನ್ನೂ ಹೊರಡಿಸಿದ್ದರು. ಈ ಬಗ್ಗೆ ಪರಿಷತ್ ಸದಸ್ಯರಲ್ಲಿ ಪ್ರಶ್ನಿಸಿದ್ದ ಪತ್ರಿಕೆಯೊಂದರ ವರದಿಗಾರನಿಗೆ ಪತ್ರಿಕೋಗೋಷ್ಠಿಯ ವರದಿ ಪತ್ರಿಕೆಯಲ್ಲಿ ಬರುವ ಮೊದಲೇ ಸಂಪ್ಯ ಪೋಲೀಸ್ ಅಧಿಕಾರಿಯು ವರದಿಗಾರನಿಗೆ ಫೋನ್ ಮಾಡಿದ್ದಾರೆ. ತನ್ನ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರೊಂದಿಗೆ ಕೇಳಿದ ಪ್ರಶ್ನೆಗಳ ಕುರಿತೂ ವರದಿಗಾರನಲ್ಲಿ ವಿಚಾರಿಸಿದ್ದಾರೆ. ಈ ವಿದ್ಯಾಮಾನವನ್ನು ಕಂಡಾಗ ಮುಸ್ಲಿಂ ಪರಿಷತ್ ಬಳಸಿಕೊಂಡು ಪತ್ರಿಕಾಗೋಷ್ಠಿಯನ್ನು ಸ್ವತಹ ಎಸ್.ಐ ಸಾಹೇಬರೇ ಮಾಡಿರುವುದು ಸ್ಪಷ್ಟವಾಗುತ್ತದೆ. ಎಸ್.ಐ ವಿರುದ್ಧ ಹಿಂದೂ ಸಂಘಟನೆಗಳು ಆರೋಪ ಮಾಡುತ್ತಿರುವ ನಡುವೆಯೇ ಎದ್ದು ಬಂದ ಮುಸ್ಲಿಂ ಯುವಜನ ಪರಿಷತ್ ಎನ್ನುವ ಸಂಘಟನೆ ಈ ಹಿಂದೆ ಇದೇ ಎಸ್.ಐ ವಿರುದ್ಧ ಮುಸ್ಲಿಂ ಮುಖಂಡರೇ ಆರೋಪ ಮಾಡಿದಾಗ ಭೂಗತವಾಗಿತ್ತು. ಆದರೆ ಎಸ್.ಐ ವಿರುದ್ಧ ಹಿಂದೂ ಸಂಘಟನೆಗಳು ಆರೋಪ ಮಾಡಿದ ತಕ್ಷಣ ಈ ಯುವಜನ ಪರಿಷತ್ ಅಧಿಕಾರಿಯ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದಾಗಲೇ ಈ ಬಗ್ಗೆ ಸಂಶಯ ಮೂಡಿದ್ದರೂ, ಪತ್ರಿಕಾಗೋಷ್ಠಿಯ ವರದಿ ಪತ್ರಿಕೆಗಳಲ್ಲಿ ಬರುವ ಮೊದಲೇ ಎಸ್.ಐ ವರದಿಗಾರನೊಂದಿಗೆ ಈ ಬಗ್ಗೆ ಪ್ರಶ್ನಿಸಿದಾಗ ಸಂಶಯ ದೃಢಪಟ್ಟಿದೆ. ತನ್ನ ಪರವಾಗಿ ಪತ್ರಿಕಾ ವರದಿ ನೀಡುವಂತೆ ಸ್ವತಹ ಅಧಿಕಾರಿಯೇ ಮುಸ್ಲಿಂ ಯುವಜನ ಪರಿಷತ್ ಎನ್ನುವ ಸಂಘಟನೆಯನ್ನು ಛೂ ಬಿಟ್ಟಿದ್ದಾರೆ ಎನ್ನುವ ಸಂಶಯಕ್ಕೂ ಇದು ಪುಷ್ಟಿ ನೀಡಿದೆ. ತನ್ನ ಸಮರ್ಥನೆಗಾಗಿ ಮುಸ್ಲಿಂ ಕಾರ್ಡ್ ಬಳಸಿದ ಪೋಲೀಸ್ ಅಧಿಕಾರಿಗಳ ನಡೆಯ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply