DAKSHINA KANNADA
ಪದ್ಮರಾಜ್ ಗ್ರೂಫ್ ಗೆ ನನಗಿಂತ ಮೊದಲೆ ಬಿಜೆಪಿ ಮುಖಂಡ ಆರ್ ಸಿ ನಾರಾಯಣ್ ಸೇರಿದ್ದರು – ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ
ಪುತ್ತೂರು ಎಪ್ರಿಲ್ 11: ವಾಟ್ಸಫ್ ನಲ್ಲಿ ಬಿಜೆಪಿ ಮುಖಂಡನ ತೇಜೋವಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಫ್ ನ ಆಡ್ಮಿನ್ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಬಿಜೆಪಿ ವಿರುದ್ದ ವಾಗ್ದಾಳಿ ನಡಸಿದ್ದಾರೆ. ಪದ್ಮರಾಜ್ ಗ್ರೂಫ್ ಗೆ ನನಗಿಂತ ಮೊದಲೆ ಬಿಜೆಪಿ ಮುಖಂಡ ಆರ್ ಸಿ ನಾರಾಯಣ್ ಸೇರಿದ್ದರು ಎಂದು ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಬಿಜೆಪಿ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ರೀತಿ ಮಾಡುತ್ತಿದೆ. ಪೋಲೀಸ್ ದೂರು ನೀಡುವ ಮೂಲಕ ಕಾಂಗ್ರೇಸ್ ಮುಖಂಡರನ್ನು ಗುರಿಯಾಗಿಸುತ್ತಿದೆ. ಕಾಂಗ್ರೇಸ್ ನ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಹೆಸರಿನಲ್ಲಿರುವ ವಾಟ್ಸಪ್ ಗ್ರೂಪ್, ಅದು ಗ್ರೂಪಿಗೆ ನನ್ನನ್ನು ಸೇರಿಸುವ ಮೊದಲೇ ಆರ್.ಸಿ. ನಾರಾಯಣ್ ಗ್ರೂಪ್ ನಲ್ಲಿ ಇದ್ದರು, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಅವರು ಗ್ರೂಪ್ ನಲ್ಲಿ ಇದ್ದಿರಬಹುದು. ಆದರೆ ಇದೀಗ ನನ್ನ ಮೇಲೆಯೇ ದೂರು ನೀಡುವ ಮೂಲಕ ನಾನು ಚುನಾವಣೆ ಕೆಲಸದಲ್ಲಿ ತೊಡಗದಂತೆ ಪ್ಲಾನ್ ಮಾಡಿದ್ದಾರೆ, ಆದರೆ ಇಂಥ ಬೆದರಿಕೆಗಳಿಗೆ ಕಾಂಗ್ರೇಸ್ ಹೆದರುವುದಿಲ್ಲ. ಬಿಜೆಪಿ ಇದೇ ರೀತಿಯ ಕೆಲಸವನ್ನು ದೆಹಲಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳ ವಿರುದ್ಧವೂ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಅಮಳ ರಾಮಚಂದ್ರ ವಾಗ್ದಾಳಿ ನಡೆಸಿದ್ದಾರೆ.