LATEST NEWS
ಗ್ರೂಪ್ ಕಾಲ್‌ಗೆ ನೂತನ ಫೀಚರ್ ಪರಿಚಯಿಸುತ್ತಿದೆ ವಾಟ್ಸಪ್
ನವದೆಹಲಿ : ವಾಟ್ಸಪ್ ಗ್ರೂಪ್ ಕಾಲ್‌ಗೆ ಹೊಸ ಟ್ಯೂನ್ ಮತ್ತು ಕಾಲ್ ಟರ್ಮಿನೇಟ್ ಆಯ್ಕೆಯನ್ನು ಪರಿಚಯಿಸುತ್ತಿದ್ದು, ಐಫೋನ್ ಬಳಕೆದಾರರಿಗೆ ಮೊದಲಿಗೆ ಲಭ್ಯವಾಗಲಿದೆ.
ಫೇಸ್‌ಬುಕ್ ಒಡೆತನದ ವಾಟ್ಸಪ್, ಹೊಸ ಹೊಸ ಫೀಚರ್‌ಗಳನ್ನು ಕಾಲಕಾಲಕ್ಕೆ ಬಳಕೆದಾರರಿಗೆ ತಲುಪಿಸುತ್ತಿರುತ್ತದೆ. ಅದರಂತೆ, ಈ ಬಾರಿ ನೂತನ ಅಪ್‌ಡೇಟ್‌ನಲ್ಲಿ ಐಫೋನ್ ವಾಟ್ಸಪ್ ಬಳಕೆದಾರರಿಗೆ ಆಕರ್ಷಕ ಫೀಚರ್ ಪರಿಚಯಿಸಲು ಸಿದ್ಧತೆ ನಡೆಸಿದೆ.
ಗ್ರೂಪ್ ಕಾಲ್‌ಗೆ ಹೊಸ ಟ್ಯೂನ್ ಮತ್ತು ಕಾಲ್ ಟರ್ಮಿನೇಟ್ ಆಯ್ಕೆಯನ್ನು ವಾಟ್ಸಪ್ ಪರಿಚಯಿಸುತ್ತಿದ್ದು, ಐಫೋನ್ ಬಳಕೆದಾರರಿಗೆ ಮೊದಲಿಗೆ ಲಭ್ಯವಾಗಲಿದೆ. ವಾಟ್ಸಪ್ ಅಪ್‌ಡೇಟ್ ಕುರಿತು ಮಾಹಿತಿ ನೀಡುವ ವಾಬೀಟಾ ಇನ್ಫೋ, ಈ ಬಗ್ಗೆ ವಿವರ ನೀಡಿದೆ. ಗ್ರೂಪ್ ಕರೆ ಬಂದಾಗ ಹೊಸ ಟ್ಯೂನ್ ಗ್ರಾಹಕರಿಗೆ ಕೇಳಿಸಲಿದೆ. ಅಲ್ಲದೆ, ಐಫೋನ್ ವಾಟ್ಸಪ್‌ನಲ್ಲಿ ಕಾಲ್ ಟರ್ಮಿನೇಟ್ ಮಾಡುವ ಆಯ್ಕೆಯೂ ಬಳಕೆದಾರರಿಗೆ ದೊರೆಯಲಿದೆ ಎಂದು ಹೇಳಿದೆ.
ಜತೆಗೆ ವಿವಿಧ ರಾಷ್ಟ್ರಗಳಲ್ಲಿ ವಾಟ್ಸಪ್ ಪೇ ಸೌಲಭ್ಯ ಕೂಡ ಒದಗಿಸಲು ವಾಟ್ಸಪ್ ಶ್ರಮಿಸುತ್ತಿದೆ. ಅದರೊಂದಿಗೆ ಐಓಎಸ್‌ನಲ್ಲಿದ್ದ ಕೆಲವೊಂದು ಬಗ್ ಅನ್ನು ಕೂಡ ಸರಿಪಡಿಸಿದೆ. ವ್ಯಾಕೇಶನ್ ಮೋಡ್ ಎನ್ನುವ ಆಯ್ಕೆಯನ್ನು ವಾಟ್ಸಪ್ ಪರಿಚಯಿಸುತ್ತಿದ್ದು, ಆರ್ಕೈವ್ ಚಾಟ್ಸ್ ಅನ್ನು ಮ್ಯೂಟ್ ಮಾಡಲಿದೆ. ಶೀಘ್ರದಲ್ಲೇ ಬಳಕೆದಾರರಿಗೆ ನೂತನ ಫೀಚರ್‌ಗಳು ಲಭ್ಯವಾಗುವ ನಿರೀಕ್ಷೆಯಿದೆ.