LATEST NEWS
ಡಯಾಬಿಟೀಸ್ ಅಥವಾ ಮಧುಮೇಹ ನಿರ್ವಹಣೆಯಲ್ಲಿ ಆಯುರ್ವೇದದ ಪಾತ್ರವೇನು?

ಮಧುಮೇಹವು ದೀರ್ಘಕಾಲದ ಚಯಾಪಚಯ (ಮೆಟಬಾಲಿಸಂ) ಸಂಬಂಧಿತ ಅಸ್ವಸ್ಥತೆಯಾಗಿದೆ. ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪಾದನೆಯಾಗದಿರುವುದು ಅಥವಾ ಉತ್ಪಾದನೆಯಾದ ಇನ್ಸುಲಿನ್ ಅನ್ನು ದೇಹವು ಪರಿಣಾಮಕಾರಿಯಾಗಿ ಬಳಸಲು ಅಸಮರ್ಥತವಾಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಈ ಪರಿಸ್ಥಿತಿಯನ್ನು ಮಧುಮೇಹ ಎಂದು ಕರೆಯಲಾಗುತ್ತದೆ.

ಮುಖ್ಯವಾಗಿ ಮೂರು ವಿಧದ ಮಧುಮೇಹಗಳಿವೆ:
ಟೈಪ್ 1 ಮಧುಮೇಹ – ಇದನ್ನು ಜುವೆನೈಲ್ ಮಧುಮೇಹ ಅಥವಾ ಇನ್ಸುಲಿನ್-ಅವಲಂಬಿತ ಮಧುಮೇಹ ಎಂದೂ ಕರೆಯುತ್ತಾರೆ. ಮೇದೋಜ್ಜೀರಕ ಗ್ರಂಥಿಯು ಕಡಿಮೆ ಇನ್ಸುಲಿನ್ ಉತ್ಪಾದಿಸುವುದು ಅಥವಾ ಇನ್ಸುಲಿನ್ ಅನ್ನು ಉತ್ಪಾದಿಸದಿರುವುದರಿಂದ ಇದು ಉಂಟಾಗುತ್ತದೆ.
ಟೈಪ್ 2 ಮಧುಮೇಹ – ದೇಹವು ಇನ್ಸುಲಿನ್ ಅನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗದೆ ಇರುವುದರಿಂದ ಈ ವಿಧದ ಮಧುಮೇಹ ಉಂಟಾಗುತ್ತದೆ.
ಮೂರನೆಯದು ಗರ್ಭಾವಸ್ಥೆಯ ಮಧುಮೇಹ – ಗರ್ಭಾವಸ್ಥೆಯಲ್ಲಿ ಉಂಟಾಗುವ ಇನ್ಸುಲಿನ್ ಅಭಾವದಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟವು ಹೆಚ್ಚಾಗಿ ಸಂಭವಿಸುತ್ತದೆ. ಸಾಮಾನ್ಯವಾಗಿ ಪ್ರಸವದ ನಂತರ ಇದು ಸಾಮಾನ್ಯ ಸ್ಥಿತಿಗೆ ಬರುತ್ತದಾದರೂ, ಇದು ನಂತರದ ಜೀವನದಲ್ಲಿ ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು.
ಅನಿಯಂತ್ರಿತ ಮಧುಮೇಹವು ಹೃದಯ ಕಾಯಿಲೆ, ಮೂತ್ರಪಿಂಡ ವೈಫಲ್ಯ, ನರಗಳ ಹಾನಿ ಮತ್ತು ದೃಷ್ಟಿ ನಷ್ಟದಂತಹ ತೊಡಕುಗಳಿಗೆ ಕಾರಣವಾಗಬಹುದು.
ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಮಧುಮೇಹದ ಆಧುನಿಕ-ದಿನದ ವಾಸ್ತವ
ಮಧುಮೇಹವು ಜಾಗತಿಕ ರೋಗವಾಗಿ ಮಾರ್ಪಟ್ಟಿದ್ದು, ಪ್ರಪಂಚದಾದ್ಯಂತ ಕೊಟ್ಯಾಂತರ ಜನರನ್ನು ಬಾಧಿಸುತ್ತಿದೆ. ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟ (IDF) ಪ್ರಕಾರ, 537 ಮಿಲಿಯನ್‌ಗಿಂತಲೂ ಹೆಚ್ಚು ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು ಈ ಸಂಖ್ಯೆ 2030 ರ ವೇಳೆಗೆ 643 ಮಿಲಿಯನ್‌ಗೆ ಏರುವ ನಿರೀಕ್ಷೆಯಿದೆ.
ಭಾರತ: ವಿಶ್ವದ ಮಧುಮೇಹ ರಾಜಧಾನಿ
ಭಾರತವು ಮಧುಮೇಹ ಪ್ರಕರಣಗಳಲ್ಲಿ ಆತಂಕಕಾರಿ ಹೆಚ್ಚಳವನ್ನು ಕಂಡಿದೆ, 77 ಮಿಲಿಯನ್‌ಗಿಂತಲೂ ಹೆಚ್ಚು ಮಧುಮೇಹ ರೋಗಿಗಳೊಂದಿಗೆ, ಚೀನಾದ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿರುವ ದೇಶವಾಗಿದೆ. ಜಡ ಜೀವನಶೈಲಿ, ಶರೀರದ ಬೊಜ್ಜಿನ ಸಮಸ್ಯೆ ಮತ್ತು ಅನಾರೋಗ್ಯಕರ ಆಹಾರಕ್ರಮಗಳು ಇದಕ್ಕೆ ಪ್ರಮುಖ ಕಾರಣವಾಗಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) 2045 ರ ವೇಳೆಗೆ ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ 134 ಮಿಲಿಯನ್ ಮೀರಬಹುದು ಎಂದು ಭವಿಷ್ಯ ನುಡಿದಿದೆ.
ಮಧುಮೇಹದ ಕಾರಣಗಳು
ಮಧುಮೇಹವು ರಾತ್ರೋರಾತ್ರಿ ಉಂಟಾಗುವ ಖಾಯಿಲೆಯಲ್ಲ. ಹಲವಾರು ಅಂಶಗಳು ಮಧುಮೇಹಕ್ಕೆ ಕಾರಣವಾಗುತ್ತವೆ, ಅವುಗಳೆಂದರೆ:
- ಆನುವಂಶಿಕತೆ – ಆನುವಂಶಿಕತೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
- ಅನಾರೋಗ್ಯಕರ ಆಹಾರ – ಸಂಸ್ಕರಿಸಿದ ಆಹಾರಗಳು, ಅಧಿಕ ಸಕ್ಕರೆಯ ಬಳಕೆ ಮತ್ತು ಅನಾರೋಗ್ಯಕರ ಕೊಬ್ಬಿನ ಸೇವನೆ.
- ದೈಹಿಕ ಚಟುವಟಿಕೆಯ ಕೊರತೆ – ಜಡ ಜೀವನಶೈಲಿ ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ.
- ಬೊಜ್ಜು – ಹೆಚ್ಚುವರಿ ಕೊಬ್ಬು, ವಿಶೇಷವಾಗಿ ಹೊಟ್ಟೆಯ ಸುತ್ತ, ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
- ಒತ್ತಡ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು – ದೀರ್ಘಕಾಲದ ಒತ್ತಡವು ಇನ್ಸುಲಿನ್ ಕಾರ್ಯದ ಮೇಲೆ ಪರಿಣಾಮ ಬೀರುವ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು.
- ಧೂಮಪಾನ ಮತ್ತು ಮದ್ಯ ಸೇವನೆ – ಇವೆರಡೂ ಇನ್ಸುಲಿನ್ ಪ್ರತಿರೋಧ ಮತ್ತು ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗುತ್ತವೆ.
ಮಧುಮೇಹವನ್ನು ಹೇಗೆ ತಡೆಗಟ್ಟಬಹುದು?
ಮಧುಮೇಹವನ್ನು ತಡೆಗಟ್ಟುವುದರಲ್ಲಿ ಜೀವನಶೈಲಿ ಬದಲಾವಣೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಆರೋಗ್ಯಕರ ದೇಹದ ತೂಕ ನಿರ್ವಹಣೆ ಮತ್ತು ಒತ್ತಡ ನಿರ್ವಹಣೆ, ಧ್ಯಾನ, ಮತ್ತು ಯೋಗಾಭ್ಯಾಸ ಈ ನಿಟ್ಟಿನಲ್ಲಿ ಸಹಾಯಕವಾಗಬಹುದು. ಅದೇ ರೀತಿ ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು ಕೂಡ ಪ್ರಯೋಜನಕಾರಿ.
ಸಾಮಾನ್ಯವಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವವರೆಗೂ ಅನೇಕ ಜನರು ತಾವು ಮಧುಮೇಹದಿಂದ ಬಳಲುತ್ತಿದ್ದೇವೆಂದು ಅರಿತುಕೊಳ್ಳುವುದಿಲ್ಲ. ಅನಿಯಂತ್ರಿತ ಮಧುಮೇಹವು ಹೃದಯ ಕಾಯಿಲೆ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ (ಮಧುಮೇಹ ನೆಫ್ರೋಪತಿ), ನರ ಹಾನಿ (ಮಧುಮೇಹ ನರರೋಗ), ದೃಷ್ಟಿ ಸಮಸ್ಯೆ (ಮಧುಮೇಹ ರೆಟಿನೋಪತಿ), ಅಂಪ್ಯೂಟೇಶನ್ (ರಕ್ತಪರಿಚಲನೆಯ ತೊಂದರೆ ಮತ್ತು ಸೋಂಕಿನ ಕಾರಣದಿಂದ) ಇತ್ಯಾದಿ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಪರಿಹಾರವೇನು?
ಮಧುಮೇಹವನ್ನು ನಿರ್ವಹಿಸಲು ಈ ಕೆಳಗಿನ ಬಹುಮುಖಿ ಚಿಕಿತ್ಸಾ ವಿಧಾನಗಳ ಅಗತ್ಯವಿದೆ.
· ಔಷಧಿಗಳು – ರಕ್ತದ ಗ್ಲೂಕೋಸ್ ನಿಯಂತ್ರಣಕ್ಕಾಗಿ ಇನ್ಸುಲಿನ್ ಮತ್ತು ಮೌಖಿಕ ಔಷಧಗಳು.
· ಆಹಾರ – ಕಡಿಮೆ ಕಾರ್ಬ್, ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್-ಭರಿತ ಆಹಾರ ಸೇವನೆ.
· ವ್ಯಾಯಾಮ ಮತ್ತು ಯೋಗ – ದೇಹದ ಜೀವಕೋಶಗಳ ಇನ್ಸುಲಿನ್ ಮೇಲಿನ ಪರಿಣಾಮವನ್ನು ಸುಧಾರಿಸುತ್ತದೆ.
· ಆಯುರ್ವೇದ ಚಿಕಿತ್ಸೆ – ಮಧುಮೇಹ ನಿರ್ವಹಣೆಗೆ ನೈಸರ್ಗಿಕ ಮತ್ತು ಸಮಗ್ರ ಚಿಕಿತ್ಸಾ ವಿಧಾನ.
ಈಝೀ ಆಯುರ್ವೇದ ಆಸ್ಪತ್ರೆಯ ವಿಶೇಷತೆ ಏನು?
ಈಸಿ ಆಯುರ್ವೇದ ಆಸ್ಪತ್ರೆಯಲ್ಲಿ, ಮಧುಮೇಹಕ್ಕೆ ಸಮಗ್ರ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆಯುರ್ವೇದ ಔಷಧಿಗಳು, ಆಹಾರ ಸಲಹೆ, ಜೀವನಶೈಲಿ ಮಾರ್ಗದರ್ಶನ ಮತ್ತು ಪಂಚಕರ್ಮ ಚಿಕಿತ್ಸೆಗಳ ಮೂಲಕ ನಿಮ್ಮ ಆರೋಗ್ಯ ಸ್ಥಿತಿಯನ್ನು ಉತ್ತಮಗೊಳಿಸಲಾಗುತ್ತದೆ.
ಎಪ್ರಿಲ್ 5 ಮತ್ತು 6 ರಂದು ನಮ್ಮ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಉಚಿತ ಸಮಾಲೋಚನೆ, ಉಚಿತ ರಕ್ತ ಪರೀಕ್ಷೆ ಮತ್ತು ಉಚಿತ ಆಯುರ್ವೇದ ಔಷಧಗಳ ಸದುಪಯೋಗವನ್ನು ಪಡೆದುಕೊಳ್ಳಬಹುದು.
ವಿಳಾಸ:
ಈಝೀ ಆಯುರ್ವೇದ ಆಸ್ಪತ್ರೆ
ಎಂಫಸಿಸ್ ಬಳಿ
ಮೋರ್ಗನ್ಸ್ ಗೇಟ್,
ಮಂಗಳೂರು.
ಈ ಕೆಳಗಿನ ಸಂಖ್ಯೆಗೆ ಕರೆಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿ
88673 85567
8618898900
Continue Reading