LATEST NEWS
ಉಡುಪಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಪ್ಯೂ…!!
ಮಂಗಳೂರು ಸೆಪ್ಟೆಂಬರ್ 03: ಕೊರೊನಾ ಪ್ರಕರಣಗಳು ಏರಿಕೆಯಲ್ಲಿರುವ ಹಿನ್ನಲೆ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ವಿಕೇಂಡ್ ಕರ್ಪ್ಯೂ ಜಾರಿಗೆ ಬರಲಿದೆ. ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಈ ವಾರಾಂತ್ಯದ ಕರ್ಪ್ಯೂ ಜಾರಿಯಲ್ಲಿರುತ್ತದೆ.
ಉಡುಪಿಯಲ್ಲಿ ವಿಕೇಂಡ್ ಲಾಕ್ ಡೌನ್ ಸಂದರ್ಭ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ಮಾಡಿದ್ದು, ಈ ಅವಧಿಯಲ್ಲಿ ಪಬ್ ಗಳನ್ನು ತೆರೆಯುವಂತಿಲ್ಲ, ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಇತರ ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ. ಮದುವೆ ಮತ್ತು ಇತರ ಸಮಾರಂಭಗಳಿಗೆ ಸಭಾಂಗಣದ ಸಾಮರ್ಥ್ಯದ ಶೇ 50 ರಷ್ಟು ಮತ್ತು ಗರಿಷ್ಠ 400 ಜನರಿಗೆ ಮೀರದಂತೆ ನಡೆಸಲು ಅನುಮತಿಸಲಾಗಿದೆ.
ಇನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ವಿಕೇಂಡ್ ಕರ್ಪ್ಯೂ ಮುಂದುವರೆಯಲಿದ್ದು, ಹಿಂದಿನಂತೆ ಕೊರೊನಾ ಮಾರ್ಗಸೂಚಿಗಳು ಮಂದುವರೆಯಲಿದೆ.