Connect with us

LATEST NEWS

ವಯನಾಡ್ ದುರಂತ – ಚಾಲಿಯಾರ್ ನದಿಯಲ್ಲಿ ತೆಲಿ ಬರುತ್ತಿರುವ ಹೆಣಗಳ ರಾಶಿ

ವಯನಾಡ್‌ ಅಗಸ್ಟ್ 04: ವಯನಾಡ್ ನ ಭೂಕುಸಿತದಿಂದ ಸಾವನಪ್ಪಿದರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೀಗ ಕೇರಳದ ಮೂರು ಜಿಲ್ಲೆಗಳ ಜೀವನದಿಯಾಗಿರುವ ‘ಚಾಲಿಯಾರ್’ ನಲ್ಲಿ ಹೆಣಗಳ ರಾಶಿಯಾ ತೆಲಿ ಬರುತ್ತಿದೆ.


ವಯನಾಡ್‌, ಮಲಪ್ಪುರಂ ಹಾಗೂ ಕೋಯಿಕ್ಕೋಡ್ ಜಿಲ್ಲೆಯ ಜನರ ಜೀವಾಳವಾಗಿದ್ದ ನದಿ ಈಗ ಹೆಣಗಳನ್ನು ಹೊತ್ತು ತರುತ್ತಿರುವ ನದಿಯಾಗಿ ಪರಿಣಮಿಸಿದೆ. ಪಶ್ಚಿಮ ಘಟ್ಟಗಳ ಎರಡು ಪ್ರಮುಖ ಉಪನದಿಗಳ ಸಂಗಮದಿಂದ ರೂಪುಗೊಳ್ಳುವ ಈ ನದಿಯಲ್ಲಿ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಶವಗಳು ತೇಲಿ ಬರುತ್ತಿವೆ.

ಹೀಗೆ ಬರುತ್ತಿರುವ ದೇಹಗಳನ್ನು ನೌಕಾಪಡೆ, ಪೊಲೀಸರು, ಅಗ್ನಿ ಶಾಮಕ, ಎನ್‌ಡಿಆರ್‌ಎಫ್‌ ಹಾಗೂ ಸ್ಥಳೀಯರು ಸೇರಿ ಹಲವು ರಕ್ಷಣಾ ತಂಡಗಳು ಹೊರತೆಗೆಯುತ್ತಿವೆ. ಶನಿವಾರ ಮತ್ತೆ ಮೂರು ದೇಹಗಳು ಹಾಗೂ 13 ದೇಹದ ಭಾಗಗಳನ್ನು ಹೊರತೆಗೆಯಲಾಗಿದೆ. ಅಲ್ಲಿಗೆ ಚಾಲಿಯಾರ್‌ ನದಿಯಿಂದ ಹೊರತೆಗೆಯಲಾದ ದೇಹಗಳ ಸಂಖ್ಯೆ 73ಕ್ಕೆ ಹಾಗೂ ದೇಹದ ಭಾಗಗಳ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಎರಡರ ಒಟ್ಟು ಮೊತ್ತ 205.
ಈ ಪೈಕಿ 37 ಪುರುಷರು, 29 ಮಹಿಳೆಯರು, 3 ಬಾಲಕರು ಹಾಗೂ 4 ಬಾಲಕಿಯರ ಮೃತದೇಹಗಳಿವೆ ಎಂದು ಮಲಪ್ಪುರಂ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *