FILM
ವಯನಾಡು ದುರಂತಕ್ಕೆ ಕರಗಿದ ಮನ, ಕೇರಳ ಸಿಎಂ ಪರಿಹಾರ ನಿಧಿಗೆ ರೂ.10 ಲಕ್ಷ ಕೊಟ್ಟ ರಶ್ಮಿಕಾ ಮಂದಣ್ಣ..!!
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (rashmika mandanna)ಅವರು ದೇವರ ಸ್ವಂತ ನಾಡಿನ ಜನರಿಗೆ ತಮ್ಮ ಕೈಲಾಗುವ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ವಯನಾಡಿನ ದುರಂತಕ್ಕೆ ಪರಿಹಾರವಾಗಿ ಕೇರಳ ಸಿಎಂ ಪರಿಹಾರ ನಿಧಿಗೆ ರೂ 10 ಲಕ್ಷ ರೂ ದೇಣಿಗೆ ನೀಡಿದ್ದಾರೆ.
ಬೆಂಗಳೂರು : ಕೇರಳದ ವಯನಾಡು ದುರಂತಕ್ಕೆ ಇಡೀ ದೇಶವೇ ಮರುಗಿದೆ, ಸಾಂತ್ವನದೊಂದಿಗೆ ಕೋಟ್ಯಾಂತರ ರೂಪಾಯಿಗಳ ದೇಣಿಗೆ ಉದ್ಯಮಿ, ಸರ್ಕಾರಗಳು, ಸೆಲೆಬ್ರಿಟಿಗಳು, ಅನಿವಾಸಿ ಭಾರತೀಯರಿಂದ ಕೇರಳಕ್ಕೆ ಹರಿದು ಬರುತ್ತಿದೆ.
ಇದೀಗ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ದೇವರ ಸ್ವಂತ ನಾಡಿನ ಜನರಿಗೆ ತಮ್ಮ ಕೈಲಾಗುವ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ವಯನಾಡಿನ ದುರಂತಕ್ಕೆ ಪರಿಹಾರವಾಗಿ ಕೇರಳ ಸಿಎಂ ಪರಿಹಾರ ನಿಧಿಗೆ ರೂ 10 ಲಕ್ಷ ರೂ ದೇಣಿಗೆ ನೀಡಿದ್ದಾರೆ.
ಇತ್ತೀಚೆಗೆಗಷ್ಟೆ ರಶ್ಮಿಕಾ ಮಂದಣ್ಣ ಅವರು ಕೇರಳಕ್ಕೆ ಭೇಟಿ ನೀಡಿ ಅಲ್ಲಿನ ಜನರ ಪ್ರೀತಿ ಮನ ಸೋತಿದ್ದರು. ಮೂಲತಾ ಕೊಡಗಿನವಳಾದ ರಶ್ಮಿಕಾ ಮಂದಣ್ಣ ಬಹುಭಾಷಾ ನಟಿಯಾಗಿದ್ದು, ಕೇರಳದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.