Connect with us

LATEST NEWS

ರಮಾನಾಥ ರೈ ಕಾರಿನ ಮೇಲೆ ನೀರಿನ ಬಾಟಲ್ ಎಸೆದ ಬಿಜೆಪಿ ಕಾರ್ಯಕರ್ತರು

ರಮಾನಾಥ ರೈ ಕಾರಿನ ಮೇಲೆ ನೀರಿನ ಬಾಟಲ್ ಎಸೆದ ಬಿಜೆಪಿ ಕಾರ್ಯಕರ್ತರು

ಮಂಗಳೂರು ಮೇ 15: ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ನೀರಿನ ಬಾಟಲ್ ಗಳನ್ನು ಎಸೆದ ಘಟನೆ ನಡೆದಿದೆ.

ಮಂಗಳೂರಿನ ಹೊರವಲಯದ ಬೊಂದಲ್ ನಲ್ಲಿ ಈ ಘಟನೆ ನಡೆದಿದ್ದು. ಸಚಿವ ರಮಾನಾಥ ರೈ ಚುನಾವಣಾ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಲು ಬರುತ್ತಿದ್ದಾಗ ಎಣಿಕೆ ಕೇಂದ್ರದ ಸಮೀಪ ಸೇರಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ರಮಾನಾಥ ರೈ ವಿರುದ್ದ ಘೋಷಣೆ ಕೂಗಿದರು. ರಮಾನಾಥ ರೈ ಅವರ ಕಾರನ್ನು ಅಡ್ಡಗಟ್ಟಲು ಪ್ರಯತ್ನಿಸಿದ್ದ ಕಾರ್ಯಕರ್ತರು. ರೈ ಅವರ ಕಾರಿನ ಮೇಲೆ ನೀರಿನ ಬಾಟಲ್ ಗಳನ್ನು ಎಸೆದರು.

ರೈ ಅವರ ಕಾರು ಸಾಗುತ್ತಿದ್ದಂತೆ ಮೋದಿ ಮೋದಿ ಎಂದು ಬಿಜೆಪಿ ಕಾರ್ಯಕರ್ತರು ಕೂಗಿದರು. ಪೊಲೀಸರು ಮಧ್ಯಪ್ರವೇಶಿಸಿ ರಮಾನಾಥ ರೈ ಅವರ ಕಾರಿಗೆ ದಾರಿ ಮಾಡಿಕೊಟ್ಟರು.