Connect with us

    DAKSHINA KANNADA

    ವಿವಾದಗಳ ಸುಳಿಯಲ್ಲಿ ಸಿಲುಕಿ ಬಂಟ್ವಾಳ ಕ್ಷೇತ್ರ ಕಳೆದುಕೊಂಡ – ರಮಾನಾಥ ರೈ

    ವಿವಾದಗಳ ಸುಳಿಯಲ್ಲಿ ಸಿಲುಕಿ ಬಂಟ್ವಾಳ ಕ್ಷೇತ್ರ ಕಳೆದುಕೊಂಡ – ರಮಾನಾಥ ರೈ

    ಮಂಗಳೂರು ಮೇ 15: 15ನೇ ಕರ್ನಾಟಕ ವಿಧಾನಸಭೆ ಫಲಿತಾಂಶ ಹಲವು ಅಚ್ಚರಿ ಫಲಿತಾಂಶಗಳನ್ನು ನೀಡಿದೆ ಅದರಲ್ಲಿ ಹೈವೋಲ್ಟೇಜ್ ಕ್ಷೇತ್ರವೆಂದೆ ಕರೆಯಲ್ಪಡುತ್ತಿದ್ದ ಬಂಟ್ವಾಳ ಕ್ಷೇತ್ರದಲ್ಲಿ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸೋಲುಂಡಿದ್ದಾರೆ.
    ಸತತ ಎಂಟನೇ ಬಾರಿಗೆ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ರಮಾನಾಥ ರೈ ಅವರು 6 ಬಾರಿ ಗೆಲುವನ್ನು ಕಂಡಿದ್ದರು. ಈ ಬಾರಿ ಕೂಡ ಗೆಲುವು ನಿಶ್ಚಿತ ಎಂಬ ವಿಶ್ವಾಸದಲ್ಲಿದ್ದರು.

    ಆದರೆ ಬಿಜೆಪಿಯ ರಾಜೇಶ್ ನಾಯಕ್ ಅವರು ರಮಾನಾಥ ರೈ ಅವರನ್ನು ಭಾರೀ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ರಾಜೇಶ್ ನಾಯಕ್ ಅವರಿಗೆ 97,802, ರೈ ಅವರಿಗೆ 81,831 ಮತಗಳು ಬಂದಿವೆ. ರಾಜೇಶ್ ನಾಯಕ್ 15,971 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

    ರಮಾನಾಥ ರೈ ಅವರ ಸೋಲಿಗೆ ಪ್ರಥಮ ಕಾರಣವಾಗಿ ಅಲ್ಪಸಂಖ್ಯಾತರ ತುಷ್ಠೀಕರಣವೇ ಎಂದು ಹೇಳಲಾಗುತ್ತಿದೆ. ಮುಸ್ಲೀಂ ರ ವೋಟ್ ನಿಂದಲೇ ಗೆದ್ದಿದ್ದೇನೆ ಎಂಬ ಹೇಳಿಕೆ ರಮಾನಾಥ ರೈ ಅವರಿಗೆ ತಿರುಗು ಬಾಣವಾಗಿ ಪರಿಣಮಿಸಿತ್ತು. ಅಲ್ಲದೆ ಕಲ್ಲಡ್ಕ ಶಾಲೆಗೆ ಬಿಸಿಯೂಟ ನಿಲ್ಲಿಸಿದ್ದು ಕೂಡ ರಮಾನಾಥ ರೈ ಅವರ ಸೋಲಿಗೆ ಪ್ರಮುಖ ಕಾರಣವಾಯಿತು. ಕಲ್ಲಡ್ಕ ಶ್ರೀರಾಮವಿದ್ಯಾಕೇಂದ್ರದ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಕೊಲ್ಲೂರು ಮೂಕಾಂಬಿಕೆ ದೇವಾಲಯದಿಂದ ಬರುತ್ತಿತ್ತು. ಸರಕಾರೀ ಶಾಲೆಗಳಿಗೆ ಮಾತ್ರ ಬಿಸಿಯೂಟ ನೀಡುವುದು ನಿಯಮ ಎನ್ನುವ ಕಾರಣ ನೀಡಿ, ಮಧ್ಯಾಹ್ನದ ಊಟವನ್ನು ನಿಲ್ಲಿಸಲಾಗಿತ್ತು.

    ಇದರ ಜೊತೆಗೆ, ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರ ಬಗ್ಗೆ ರಮಾನಾಥ ರೈ ಅವರು ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ಸುದ್ದಿ, ಬಿಲ್ಲವ ಸಮದಾಯವರನ್ನು ಕೆರಳಿಸಿತ್ತು.

    ಈ ಎಲ್ಲಾ ವಿವಾದಗಳು ರಮಾನಾಥ ರೈ ಅವರ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಎಸ್ ಡಿಪಿಐಯೊಂದಿಗೆ ಒಳ ಒಪ್ಪಂದ ಕೂಡ ರಮಾನಾಥ ರೈ ಅವರ ಗೆಲುವಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಹೇಳಲಾಗುತ್ತಿದೆ.
    ಬಂಟ್ವಾಳದಲ್ಲಿ ಏಳನೇ ಬಾರಿ ಗೆಲುವು ಕನಸು ಕಾಣುತ್ತಿದ್ದ ರಮನಾಥ ರೈ ಅವರ ಆಸೆಗೆ ಬಿಜೆಪಿ ತಣ್ಣಿರೇರಚಿದೆ. ವಿವಾದಗಳನ್ನು ಮೈಮೇಲೆ ಎಳೆದುಕೊಂಡು ರಮಾನಾಥ ರೈ ಅವರು ಈ ಬಾರಿ ಚುನಾವಣೆಯಲ್ಲಿ ಹೀನಾಯ ಸೋಲಬೇಕಾಗಿ ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply