Connect with us

KARNATAKA

ಕಾಡಿನಲ್ಲಿ ಸಫಾರಿಗೆ ಹೋಗೊ ಮುನ್ನ ಎಚ್ಚರ… ಸಫಾರಿ ಹೋದ ಪ್ರವಾಸಿಗರ ಮೇಲೆ ಡಬಲ್ ಎಲಿಫೆಂಟ್ ಆಟ್ಯಾಕ್.

ಚಾಮರಾಜನಗರ, ಮಾರ್ಚ್15: ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿಯಲ್ಲಿ ಸಫಾರಿ ಹೋದ ಪ್ರವಾಸಿಗರಿಗೆ ಎರಡು ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ.

ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗದ್ದಾರೆ. ಸಫಾರಿಗೆ ಹೋದಾಗ ಹಿಂದಿನಿಂದ ಒಂದು ಕಾಡಾನೆ ದಾಳಿಗೆ ಯತ್ನಮಾಡಿದ್ದ, ಚಾಲಕ ಶರವೇಗದಲ್ಲಿ ವಾಹನ ಚಲಾಯಿಸಿಕೊಂಡು ಹೋದರೆ ವಾಹನದ ಮುಂಭಾಗದಿಂದಲು ಮತ್ತೊಂದು ಕಾಡಾನೆ ದಾಳಿ ಮಾಡಿದೆ.

ಎರಡು ಕಡೆಯಿಂದ ಕಾಡಾನೆ ಬಂದರೂ ಹೆದರದೆ ಚಾಲಕ ವಾಹನ ಚಲಾಯಿಸಿದ್ದಾನೆ. ವೇಗವಾಗಿ ವಾಹನ ಚಲಾಯಿಸಿದ್ದರಿಂದ ಕಾಡಾನೆ ಓಡಿ ಹೋಗಿದೆ. ಚಾಲಕ ನಾಗರಾಜು ರವರ ಸಮಯ ಪ್ರಜ್ಞೆ, ಧೈರ್ಯ ಕ್ಕೆ  ಪ್ರವಾಸಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ನಮ್ಮನ್ನ ನಂಬಿ ಪ್ರವಾಸಿಗರು ಸಫಾರಿಗೆ ಬಂದಿರುತ್ತಾರೆ. ನಮ್ಮ ಪ್ರಾಣ ಹೋದರೂ ಸರಿ ಪ್ರವಾಸಿಗರ ಪ್ರಾಣ ಉಳಿಸುವುದು ನಮ್ಮ ಕರ್ತವ್ಯ ಎಂದು ಚಾಲಕ ನಾಗರಾಜ್ ಹೇಳಿದ್ದಾರೆ.

Video: