FILM
ಸಂಗೀತ ನಿರ್ದೇಶಕ ವಾಜಿದ್ ಖಾನ್ ಪತ್ನಿಗೆ ಮತಾಂತರವಾಗಲು ಕಿರುಕುಳ
ಮುಂಬೈ : ಲವ್ ಜಿಹಾದ ಹಾಗೂ ಮತಾಂತರ ವಿಷಯ ಈಗ ದೇಶದಲ್ಲಿ ಭಾರೀ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದೆ. ಈಗಾಗಲೇ ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲಿ ಈ ಕುರಿತಂತೆ ಕಾನೂನು ತರಲು ಪ್ರಯತ್ನಿಸಲಾಗುತ್ತಿದೆ. ಈ ನಡುವೆ ಬಾಲಿವುಡ್ ಅಂಗಳದಲ್ಲೂ ಬಲವಂತದ ಮತಾಂತರ ಸದ್ದು ಮಾಡುತ್ತಿದೆ. ಸಂಗೀತ ನಿರ್ದೇಶಕ ವಾಜಿದ್ ಖಾನ್ ಪತ್ನಿಗೆ ತಮಗೆ ಮತಾಂತರ ಕಿರುಕುಳ ನೀಡಲಾಗಿತ್ತು ಎಂದು ಅವರು ತಮ್ಮ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದೇ ವರ್ಷದ ಮೇ ತಿಂಗಳಿನಲ್ಲಿ ಮೃತಪಟ್ಟ ವಾಜಿದ್ ಖಾನ್ ಹಾಗೂ ಕಮಲ್ರುಖ್ ಖಾನ್ ಕಾಲೇಜಿನಲ್ಲಿ ಪರಸ್ಪರ ಪ್ರೀತಿಸಿ ನಂತರ ವಿವಾಹವಾಗಿದ್ದರು. ಕಮಲ್ರುಖ್ ಪಾರ್ಸಿ ಧರ್ಮದವಳಾಗಿದ್ದು, ವಾಜಿದ್ ಮುಸ್ಲಿಂ ಧರ್ಮಕ್ಕೆ ಸೇರಿದವರು. ಮದುವೆಯಾದ ಬಳಿಕ ಗಂಡನ ಕುಟುಂಬಸ್ಥರು ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದರು. ಇದನ್ನು ನಿರಾಕರಿಸಿದ ಕಮಲ್ರುಖ್ ಮತ್ತು ವಾಜಿದ್ ಖಾನ್ ನಡುವೆ ಸಂಸಾರದ ಬಿರುಕು ಉಂಟಾಯಿತು.
ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದ ಕಾರಣ ತನ್ನ ತಾನು ಅನುಭವಿಸಿರುವ ಕಿರುಕುಳಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಟಿಪ್ಪಣಿಯೊಂದಿಗೆ ಮ್ಯೂಸಿಕ್ ಕಂಪೋಸರ್ ವಾಜಿದ್ ಖಾನ್ ಪತ್ನಿ ಕಮಲ್ರುಖ್ ಖಾನ್ ಬಹಿರಂಗಪಡಿಸಿದ್ದಾರೆ.
16 ವರ್ಷದ ಮಗಳು ಹಾಗೂ 9 ವರ್ಷದ ಮಗ ಇರುವ ಕಮಲ್ರುಖ್, ಮತಾಂತರಗೊಳ್ಳುವ ಮೂಲಕ ವಾಜಿದ್ ಖಾನ್ ಮತ್ತು ಅವರ ಕುಟುಂಬದತ್ತ ಬಾಗಲು ಘನತೆ ಮತ್ತು ಸ್ವಾಭಿಮಾನ ಅವಕಾಶ ನೀಡಲಿಲ್ಲ. ಈ ಮತಾಂತರ ನಾನು ಭಾವಿಸಿದಷ್ಟು ಸುಲಭವಾಗಿಲ್ಲ ಎಂದು ಇನ್ಸ್ಟಾಗ್ರಾಂ ಪೇಜ್ನಲ್ಲಿ ತಿಳಿಸಿದ್ದಾರೆ. ಸ್ವಾತಂತ್ರ್ಯಕ್ಕೆ ಹೆಚ್ಚು ಅವಕಾಶ ನೀಡಿ, ಎಲ್ಲಾ ಹಂತದ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಿದ್ದ ಪಾರ್ಸಿ ಧರ್ಮ ಮದುವೆಯ ಬಳಿಕ ಗಂಡನ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿದೆ. ಎಂದಿಗೂ ಎಲ್ಲಾ ಧರ್ಮದ ನಂಬಿಕೆಗಳನ್ನು ಗೌರವಿಸಿದ್ದೇನೆ ಮತ್ತು ಆಚರಿಸಿದ್ದೇನೆ. ಆದರೆ ಈ ಮತಾಂತರ ವಿಚಾರದಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
View this post on Instagram