DAKSHINA KANNADA
ವಿಟ್ಲ – ಇಕೋ ಕಾರಿಗೆ ಲಾರಿ ಡಿಕ್ಕಿ….ಕಾರು ಜಖಂ
ವಿಟ್ಲ ಜುಲೈ 22 : ಮಣ್ಣಿನ ಲಾರಿಯೊಂದು ಇಕೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡ ಘಟನೆ ಉಕ್ಕುಡ ಕನ್ಯಾನ ರಸ್ತೆಯಲ್ಲಿ ನಡೆದಿದೆ.
ಕನ್ಯಾನ ಕಡೆಯಿಂದ ಬರುತ್ತಿದ್ದ ಬಾಕ್ಸೈಟ್ ಮಣ್ಣಿನ ಲಾರಿ ಕೇಪಳಗುಡ್ಡೆ ತಿರುವಿನಲ್ಲಿ ದೇಲಂತಬೆಟ್ಟು ಕಡೆಯಿಂದ ಬರುತ್ತಿದ್ದ ಇಕೋ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ಇಕೋ ವಾಹನದ ಬಲ ಭಾಗ ಸಂಪೂರ್ಣ ಜಖಂಗೊಂಡಿದೆ. ದೇಲಂತಬೆಟ್ಟು ನಿವಾಸಿ ಅವಿಲ್ ಡಿಸೋಜ ಅವರಿಗೆ ಸೇರಿದ ಇಕೋ ವಾಹನವಾಗಿದ್ದು, ಕನ್ಯಾನ ಮೂಲಕ ಮಂಗಳೂರು ಕಛೇರಿಗೆ ತೆರಳಿದ್ದ ಸಂದರ್ಭ ಈಘಟನೆ ನಡೆದಿದೆ. ಸ್ಥಳಕ್ಕೆ 112 ತುರ್ತು ವಾಹನ ಬಂದಿದ್ದು, ವಾಹನಗಳನ್ನು ವಿಟ್ಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
You must be logged in to post a comment Login