BANTWAL
ವಿಟ್ಲ: ಉದ್ಯಮಿ ಮನೆಗೆ ನುಗ್ಗಿ ಹಲ್ಲೆ ಯತ್ನಿಸಿದ ಕುಡುಕ
ವಿಟ್ಲ, ಜುಲೈ 02: ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕುಡುಕನೋರ್ವ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ವಿಟ್ಲ ಚಂದಳಿಕೆಯಲ್ಲಿ ನಡೆದಿದೆ.
ಚಂದಳಿಕೆ ನಿವಾಸಿ ಉದ್ಯಮಿ ನವೀನ್ ಶೆಟ್ಟಿ ಎಂಬವರ ಮನೆಗೆ ಚಂದಳಿಕೆ ಸಮೀಪದ ರಿಕ್ಷಾ ಡ್ರೈವರ್ ಗಣೇಶ್ ಶೆಟ್ಟಿ ಎಂಬಾತ ಕುಡಿದ ಮತ್ತಿನಲ್ಲಿ ಕಳೆದ ರಾತ್ರಿ ನವೀನ್ ಅವರ ಮನೆಯ ಮುಂದೆ ನಿಂತು ಬೊಬ್ಬೆ ಹಾಕಿದ್ದಾನೆ. ನಿನ್ನೆ ಸುಮಾರು ಸಂಜೆ 4.50ರ ಹೊತ್ತಿಗೆ ನವೀನ್ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಇದ್ದ ವೇಳೆ ಈ ಕುಡುಕ ಏಕಾಏಕಿ ಮನೆಯೊಳಗೆ ನುಗ್ಗಿ, ಹೆಂಡತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಗಾಬರಿಗೊಂಡ ಮಹಿಳೆ ಬೊಬ್ಬೆ ಹೊಡೆದು ಮನೆಯ ರೂಂ ಗೆ ಮಕ್ಕಳೊಂದಿಗೆ ಓಡಿ ಹೋಗಿ, ತನ್ನ ಗಂಡನಿಗೆ ಫೋನ್ ಮುಖಾಂತರ ವಿಷಯ ತಿಳಿಸಿದ್ದಾರೆ.