Connect with us

    BANTWAL

    ವಿಟ್ಲ: ಹೃದಯಾಘಾತಕ್ಕೆ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಬಲಿ..!

    ವಿಟ್ಲ, ಮೇ 18: ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದಾಗಿ ಸಾವನ್ನಪ್ಪಿದ ಘಟನೆ ಮೇ.18 ರಂದು ವಿಟ್ಲ ಸಮೀಪದ ಅಳಿಕೆ ಎಂಬಲ್ಲಿ ನಡೆದಿದೆ.

    ಮೃತಳನ್ನು ಅಳಿಕೆ ಗ್ರಾಮದ ಚಂದಾಡಿ ನಿವಾಸಿಗಳಾದ ವಿನಯ್ ಹೆಗ್ಡೆ ಹಾಗೂ ಸಾಯಿಗೀತಾ ದಂಪತಿಗಳ ಪುತ್ರಿ ವಿಠಲ್ ಜೇಸೀಸ್ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಎನ್ನಲಾಗಿದೆ.ಅನ್ವಿತಾ ಜೇಸೀಸ್ ಶಾಲೆಯ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಇಂದು ಹಠಾತ್ ಆಗಿ ಸಂಭವಿಸಿದ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಅನ್ವಿತಾ ಸಾವನ್ನಪ್ಪಿದ ಕಾರಣ ಜೇಸೀಸ್ ಶಾಲೆಗೆ ರಜೆ ನೀಡಲಾಗಿದೆ.

    ಮೃತರು ತಂದೆ-ತಾಯಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಇದ್ದ ಓರ್ವ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    Share Information
    Advertisement
    Click to comment

    You must be logged in to post a comment Login

    Leave a Reply