8ನೇ ವಯಸ್ಸಿನಲ್ಲಿ ದೀಕ್ಷೆ ಪಡೆದು, ಕಾಲಿಗೆ ಚಕ್ರ ಕಟ್ಟಿ ದೇಶ ಸುತ್ತಿದ್ದ ಸಂತ ಪೇಜಾವರ ಶ್ರೀಗಳು

ಆ ಬಾಲಕನಿಗೆ 6 ವರ್ಷ ಪ್ರಾಯ ದೇವರಲ್ಲಿ ಅಪಾರ ಭಕ್ತಿ ಅದ್ಭುತ ಚುರುಕು ಬುದ್ಧಿ ತಂದೆ ತಾಯಿಯ ಜೊತೆ ಉಡುಪಿಗೆ ಪರ್ಯಾಯಕ್ಕೆ ಬಂದಿದ್ದ ಆಗಿನ ಸ್ವಾಮೀಜಿ ಈ ಬಾಲಕನನ್ನು ಕೇಳಿದರು ನೀನು ನನ್ನಂತೆ ಸ್ವಾಮೀಜಿ ಆಗ್ತಿಯಾ…. 6 ವರ್ಷದ ಬಾಲಕ ತಟ್ಟನೆ ಉತ್ತರಿಸಿದ ಹೂಂ… ಈ ಬಾಲಕ ಬೇರಾರು ಅಲ್ಲ ಉಡುಪಿಯಲ್ಲಿ 5 ನೇ ಬಾರಿ ಸರ್ವಜ್ನ ಪೀಠವೇರಿದ ನಾಡು ಕಂಡ ಮಹಾನ್ ಯತಿಗಳಲ್ಲಿ ಒಬ್ಬರಾದ ಪೇಜಾವರ ಮಠದ ವಿಶ್ವೇಶ ತೀರ್ಥರು ಅವರು ಮೊದಲ ಬಾರಿ ಉಡುಪಿಗೆ ಬಂದಾಗ ಪೇಜಾವರ ಮಠದ್ದೇ ಪರ್ಯಾಯ ನಡೆಯುತ್ತಿತ್ತು,,,,
ಪೇಜಾವರ ಶ್ರೀ ಅಂದ್ರೆ ದೇಶ ವಿದೇಶದಲ್ಲೂ ಹೆಸರು. ಎಲ್ಲೂ ಕೋಪಗೊಳ್ಳದೆ ತನ್ನ ಧಾರ್ಮಿಕ ನಡೆ ನುಡಿಗಳಿಗೆ ಬದ್ಧರಾದವರು. ಧರ್ಮದ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಸಂತ…


ಪೇಜಾವರ ಶ್ರೀಗಳ ಪೂರ್ವಾಶ್ರಮದ ಹೆಸರು ವೆಂಕಟರಾಮ 1931 ಏಪ್ರಿಲ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರಾಮಕುಂಜದಲ್ಲಿ ಜನಿಸಿದರು ತಂದೆ ನಾರಾಯಣಾಚಾರ್ಯ ತಾಯಿ ಕಮಲಮ್ಮ 7 ನೇ ವರ್ಷಕ್ಕೆ ಗಾಯತ್ರಿ ಮಂತ್ರೋಪದೇಶ . ರಾಮಕುಂಜ ಎನ್ನುವ ಕುಗ್ರಾಮದ ಸಂಸ್ಕೃತ ಶಾಲೆಯಲ್ಲಿ 7 ನೇ ತರಗತಿವರೆಗೆ ವಿದ್ಯಾಭ್ಯಾಸ.

ಆಗಿನ ಪೇಜಾವರ ಮಠಾಧೀಶರಾದ ವಿಶ್ವ ಮಾನ್ಯ ತೀರ್ಥರು ಪರ್ಯಾಯ ಮುಗಿಸಿ ಸಂಚಾರಕ್ಕೆ ಹೊರಟಿದ್ದರು. ಹಂಪೆ ತಲುಪಿದಾಗ ತಕ್ಷಣ ಸ್ವಾಮೀಜಿ ಬಾಲಕ ವೆಂಕಟರಾಮನನ್ನು ಕರೆಸಿದರು. 1938 ಡಿಸೆಂಬರ್ 3 ರಂದು ಹಂಪೆಯ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಆಶ್ರಮ ದೀಕ್ಷೆ ನಡೆಯಿತು. ವೆಂಕಟರಾಮ ಎಂಬ ಪುಟ್ಟ ಬಾಲಕ ದೀಕ್ಷೆ ಪಡೆದು ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ ಪೇಜಾವರ ಮಠ ಪರಂಪರೆಯ 33 ನೇ ಯತಿಯಾಗಿ ವಿಶ್ವೇಶ ತೀರ್ಥರಾಗಿ ಪ್ರಸಿದ್ಧರಾದರು

ಮುಂದೆ ಉಡುಪಿಗೆ ಆಗಮಿಸಿದ ಫಲಿಮಾರು ಮಠಾಧೀಶರಾದ ವಿದ್ಯಾಮಾನ್ಯ ತೀರ್ಥರು ಈ ಪುಟ್ಟ ಬಾಲಕನಲ್ಲಿದ್ದ ಅಪಾರ ಶಕ್ತಿ ಮತ್ತು ಚುರುಕು ಮತಿಯನ್ನು ಗಮನಿಸಿದರು1943ರಲ್ಲಿ ಉಡುಪಿಯ ಭಂಡಾರಕೇರಿ ಮಠದಲ್ಲಿ ವಿದ್ವಾಂಸರ ಮಹಾ ಸಮ್ಮೇಳನ ನಡೆಯಿತು 12 ಹರೆಯದ ಬಾಲಕ ಪೇಜಾವರ ಶ್ರೀ ಮಂಡಿಸಿದ ಚುಟುಕು ಭಾಷಣ ಸೇರಿದ ಘಟಾನುಘಟಿ ಪಂಡಿತರನ್ನೇ ಬೆರಗುಗೊಳಿಸಿತ್ತಂತೆ ಅಂದಿನಿAದ ವಿದ್ಯಾಮಾನ್ಯ ತೀರ್ಥರು ಪೇಜಾವರಶ್ರೀಗಳಿಗೆ ಉನ್ನತ ವ್ಯಾಸಂಗ ನೀಡಿದರು

1952 ಜನವರಿ 18 ರಂದು ತನ್ನ 21 ನೆ ವಯಸ್ಸಿನಲ್ಲಿ ಪ್ರಥಮ ಬಾರಿಗೆ ಪರ್ಯಾಯ ಪೀಠವೇರಿದರು. ತನ್ನ ಕಿರಿಯ ವಯಸ್ಸಿನಲ್ಲಿ ಪೀಠವೇರಿ ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನೆರವೇರಿಸಿ ತನ್ನ ಶಕ್ತಿ ಸಾಮರ್ಥ್ಯವನ್ನು ಅಂದೇ ಪ್ರದರ್ಶಿಸಿದ್ದರು ಪೇರಾವರ ಶ್ರೀ ಆ ಬಳಿಕ 1968, 1984,2000, 2016ರಲ್ಲಿ 5 ನೇ ಬಾರಿ ಪರ್ಯಾಯ ಪೀಠವೇರಿದ್ದಾರೆ. ಪ್ರತೀ ಪರ್ಯಾಯ ದಲ್ಲೂ ಅದ್ಭುತ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಜ್ನಾನ ಯಜ್ನಕ್ಕೆ ನಿರಂತರ ಬೆಂಬಲವಾಗಿ ನಿಂತರು

ಪೇಜಾವರ ಶ್ರೀಗಳು ಇತರ ಮಠಾದಿಪತಿಗಳಿಗಿಂತ ಭಿನ್ನವಾಗಿ ನಿಂತಿದ್ದಾರೆ. ಕಾರಣ ಅವರ ಚಿಂತನೆಗಳು ಸಮಾಜಿಕ ದೃಷ್ಟಿಕೋನವನ್ನು ಇಟ್ಟುಕೊಂಡಿವೆ . ಈ ಕಾರಣಕ್ಕಾಗಿ ಹಲವು ಬಾರಿ ಹಲವರಿಂದ ವಿರೋಧ ಕಟ್ಟಿಕೊಂಡಿದ್ದಾರೆ. ಒಂದು ವರ್ಗದ ಸ್ವಾಮೀಜಿ ಎಂಬ ಅಪವಾದ ಇದ್ದರೂ ತನ್ನ ಸ್ಪಷ್ಟ ನಿಲುವು ಏನು ಎಂಬುದನ್ನು ಸಾರ್ವಜನಿಕವಾಗಿ ತೆರೆದಿಟ್ಟವರು ಪೇಜಾವರ ಶ್ರೀ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಯಿಂದ ಇಂದಿನ ಪ್ರಧಾನಿ ಮೋದಿಯವರೆಗೂ ತಾನು ಎಲ್ಲರೊಂದಿಗೆ ಹೇಗಿದ್ದೆ ಎಂಬುದನ್ನು ತಿಳಿಸಿದ್ದಾರೆ

ತನ್ನ 40 ರ ಹರೆಯದಲ್ಲಿ ಮೊದಲ ಬಾರಿಗೆ ದಲಿತ ಕೇರಿಗೆ ಭೇಟಿ ನೀಡಿ ಹೊಸ ಕ್ರಾಂತಿಯನ್ನೇ ಮಾಡಿದವರು ಪೇಜಾವರ ಶ್ರೀ. ಈ ಭೇಟಿ ನಾಡಿನ ಇತರ ಮಠ ಮಾನ್ಯಗಳಿಂದ ಆಕ್ಷೇಪ ವ್ಯಕ್ತವಾಯಿತು ಇನ್ನೊಂದೆಡೆ ಇವೆಲ್ಲಾ ಬರಿಯ ನಾಟಕ ಅಂತಾ ಕೆಲವರು ಹೇಳಿದರು. ಇದರಿಂದ ನೊಂದ ಸ್ವಾಮೀಜಿ ಒಂದು ಮಾತು ಹೇಳಿದ್ದರಂತೆ.ತಪ್ಪು ಅರ್ಥ ಗೃಹಿಸಿ ತನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ನಾನು ಪೀಠ ತ್ಯಾಗ ಮಾಡಿ ಸನ್ಯಾಸಿಯಾಗಿ ಬದುಕುತ್ತೇನೆ ಎಂದಿದ್ದರು. ಇಂದಿಗೂ ಪೇಜಾವರ ಶ್ರೀ ಪ್ರತಿ ವರ್ಷ ದಲಿತ ಕೇರಿಗೆ ಭೇಟಿ ನೀಡುತ್ತಾರೆ ಸಾಂತ್ವನ ಹೇಳುತ್ತಾರೆ

ಕೆಲವೊಮ್ಮೆ ಪೇಜಾವರ ಶ್ರೀ ಹೇಳಿಕೆ ಕೊಟ್ಟು ವಿವಾದಕ್ಕೆ ಸಿಲುಕಿದ್ದಾರೆ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿರುವಂತೆ ಕಾಣುವ ದ್ವಂದ್ವ ಮಾತುಗಳು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ ತನ್ನ ಮಾತುಗಳಿಗೆ ಹೇಳಿಕೆಗಳಿಗೆ ಸದಾ ಬದ್ಧರಾದವರು ಪೇಜಾವರ ಶ್ರೀ. ಇತ್ತೀಚಿನ ಭಗವಾನ್ ವಿರುದ್ಧದ ಚರ್ಚೆ. ಸಾಯಿಬಾಬಾ ದೇವರಲ್ಲ ಇತ್ಯಾದಿ ವಿಚಾರಗಳಲ್ಲಿ ಸದಾ ತನ್ನ ಮಾತುಗಳನ್ನು ಸಮರ್ಥಿಸಿ ವಿಚಾರ ಮಂಡಿಸಿದವರು ಪೇಜಾವರ ಶ್ರೀ

ತುರ್ತು ಪರಿಸ್ಥಿತಿ ,ರಾಮ ಮಂದಿರ ಗಲಾಟೆ ಸಂದರ್ಭದಲ್ಲಿ ಹೋರಾಟದಲ್ಲಿ ಧುಮುಕಿ ಜೈಲು ಸೇರಿದ್ದರು . ಇದರಿಂದ ಬಿಜೆಪಿ ಪಕ್ಷದ ಪರ ಇದ್ದಾರೆ ಅಂತಾ ಕೆಲವರು ಹೇಳಿದ್ರೆ ಇನ್ನು ಕೆಲವರು ಇವರು ಕೋಮುವಾದಿ ಅಂತಾ ದೂರಿದ್ದರು. ಅಂತಹವರಿಗೆ ಪೇರಾವರ ಶ್ರೀ ಹೇಳಿದ ಉತ್ತರ ನಾನು ಪ್ರೇಮವಾದಿ … ಇಷ್ಟೇ ಅಲ್ಲದೆ ದೇಶದಲ್ಲಿ ಎಲ್ಲೇ ಪ್ರಕೃತಿ ವಿಕೋಪಗಳು ಸಂಭವಿಸಿದರೂ ತಕ್ಷಣ ದಾವಿಸಿ ಪರಿಹಾರ ಕಾರ್ಯಕ್ಕೆ ತೊಡಗಿಸಿಕೊಳ್ಳುತ್ತಾರೆ.


ಆಂಧ್ರದ ಚಂಡಮಾರುತ ಸಂಭಿವಿಸಿದಾಗ, ಮಂತ್ರಾಲಯದಲ್ಲಿ ಭೀಕರ ನೆರೆ ಬಂದಾಗ ಇತ್ತೀಚೆಗೆ ತಮಿಳುನಾಡಿನ ಪ್ರವಾಹ ಸಂದರ್ಬದಲ್ಲಿ ಪೇಜಾವರ ಮಠದ ವತಿಯಿಂದ ಸಂತ್ರಸ್ತರಿಗೆ ಪರಿಹಾರ ನೀಡಲಾಗಿತ್ತು. ಆಂಧ್ರ ಪ್ರದೇಶದಲ್ಲಿ ಸಂಭವಿಸಿದ ಚಂಡ ಮಾರುತದಲ್ಲಿ ಮನ ಕಳಕೊಂಡವರಿಗೆ ಪೇಜಾವಕರ ಮಠದ ವತಿಯಿಂದ 150 ಮನೆ ನಿರ್ಮಿಸಿಕೊಡಲಾಗಿತ್ತು.

ಇಷ್ಟೇ ಅಲ್ಲದೆ ದೇಶ ವಿದೇಶಗಳಲ್ಲೂ ಪೇಜಾವರ ಶ್ರೀಗಳ ಭಕ್ತರಿದ್ದಾರೆ, ಶಿಷ್ಯರಿದ್ದಾರೆ. ಇಂದು ದೇಶದ ಅಗ್ರಮಾನ್ಯ ಯತಿಗಳಲ್ಲಿ ಪೇಜಾವರ ಶ್ರೀ ಒಬ್ಬರಾಗಿದ್ದಾರೆ. ಎಲ್ಲಾ ಮಠ ಮಂದಿರಗಳ ಸ್ವಾಮೀಜಿಗಳೊಂದಿಗೆ ನಿಕಟ ಸಂಪರ್ಕ ಉತ್ತಮ ಬಾಂಧವ್ಯ ಹೊಂದಿ ಧರ್ಮ ಸಮನ್ವಯತೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.